ಗಣಿತಜ್ಞ ಬಿ.ಎಂ.ಶಿವರುದ್ರಯ್ಯಗೆ ಡಾ. ಎಚ್.ಎನ್. ಪ್ರಶಸ್ತಿ

shivarudraian
Published on

ಬೆಂಗಳೂರು: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಕೊಡಮಾಡುವ ಡಾ. ಎಚ್.ಎನ್. ಪ್ರಶಸ್ತಿಗೆ ಬೆಂಗಳೂರು ಮೂಲದ ಗಣಿತಜ್ಞ ಡಾ. ಬಿ.ಎಂ.ಶಿವರುದ್ರಯ್ಯ ಆಯ್ಕೆಯಾಗಿದ್ದಾರೆ.

ಈ ತಿಂಗಳ 29ರಂದು ರಾಯಚೂರು ಜಿಲ್ಲೆಯ ಲಿಂಗಸೂರಿನಲ್ಲಿ ನಡೆಯಲಿರುವ 3ನೇ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನದಲ್ಲಿ ಪುರಸ್ಕೃತರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೇರಿ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಪರಿಷತ್‌ನ ಅಧ್ಯಕ್ಷ ಹುಲಿಕಲ್ ನಟರಾಜ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net