

ಉಪ್ಪಿನಂಗಡಿ: ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ, ಸಂಶೋಧನಾತ್ಮಕ ಮನೋಭಾವ ಬೆಳೆಸುವ ದೃಷ್ಟಿಯಿಂದ ಸ್ಪೆಕ್ಟ್ರಂ-2025 ಎಂಬ ಶೀರ್ಷಿಕೆಯೊಂದಿಗೆ ಗಣಿತ, ವಿಜ್ಞಾನ ಮಾದರಿ ತಯಾರಿಸಿ ಪ್ರದರ್ಶಿಸುವ ಸ್ಪರ್ಧೆ ಇಂದ್ರಪ್ರಸ್ಥ ವಿದ್ಯಾಲಯದ ಇಂದ್ರಪ್ರಭಾ ಸಭಾ ಭವನದಲ್ಲಿ ಸೋಮವಾರ ನಡೆಯಿತು. ಮುಖ್ಯ ತೀರ್ಪುಗಾರರಾಗಿ ಆಗಮಿಸಿದ ನಿವೃತ್ತ ಮುಖ್ಯಶಿಕ್ಷಕಿ ಜಯಶ್ರೀ, ಕರಾಯ ಸರ್ಕಾರಿ ಪ್ರೌಢ ಶಾಲೆ ಸಹಶಿಕ್ಷಕಿ ಮಂಗಳಾ ಎಂ. ಉದ್ಘಾಟಿಸಿದರು. ಹಿರಿಯ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳು ಪ್ರತ್ಯೇಕ ವಿಭಾಗಗಳಲ್ಲಿ ಭಾಗವಹಿಸಿದ್ದು ಪ್ರತಿ ವಿಭಾಗದಲ್ಲಿ ವಿವಿಧ ಉಪ ವಿಷಯಗಳಿಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. 152 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕರುಣಾಕರ ಸುವರ್ಣ ಪ್ರದರ್ಶನ ವೀಕ್ಷಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯಶಿಕ್ಷಕಿ ವೀಣಾ ಆರ್.ಪ್ರಸಾದ್ ಉಪಸ್ಥಿತರಿದ್ದರು. ಸಂಸ್ಥೆ ಶಿಕ್ಷಕಿ ನಿಶಿತಾ ಕೆ.ಕೆ.ಕಾರ್ಯಕ್ರಮದ ಮುಖ್ಯ ಆಯೋಜಕರಾಗಿದ್ದರು. ಶಿಕ್ಷಕಿ ಜ್ಯೋತಿಕಿರಣ್ ನಿರೂಪಿಸಿದರು.