

ಸಿದ್ದಾಪುರ: ಪಟ್ಟಣದ ಹಾಳದಕಟ್ಟಾದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಆವಿಷ್ಕಾರ ಅಭಿಯಾನದಡಿ ಗಣಿತ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಹಾಗೂ ರಂಗೋತ್ಸವ ಇತ್ತೀಚೆಗೆ ನಡೆಯಿತು.
ಕುಮಟಾ ಡಯಟ್ನ ಪ್ರಾಚಾರ್ಯ ಎಂ.ಎಸ್. ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ರಘುವೀರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಪಪಂ ಸದಸ್ಯರಾದ ರಾಧಿಕಾ ಕಾನಗೋಡ, ನಂದನ್ ಬೋರಕರ, ರವಿಕುಮಾರ ನಾಯ್ಕ, ಡಯಟ್ ಉಪನ್ಯಾಸಕ ಭಾಸ್ಕರ್ ಹೆಗಡೆ, ಮುಖ್ಯಾಧ್ಯಾಪಕಿ ಸುಲೋಚನಾ, ಸಿಆರ್ಪಿ ಶೋಭಾ ಡಿ.ಸಿ., ಇತರರು ಉಪಸ್ಥಿತರಿದ್ದರು.
ಬಿಇಒ ಎಂ.ಎಚ್. ನಾಯ್ಕ ಭೇಟಿ ನೀಡಿ ಕಾರ್ಯಕ್ರಮ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಚೈತನ್ಯಕುಮಾರ್ ಕೆ., ಶಿಕ್ಷಣ ಸಂಯೋಜಕ ಮಂಜುನಾಥ ಶಾಸ್ತ್ರಿ, ಪ್ರೌಢಶಾಲಾ ಶಿಕ್ಷಕ ವೃಂದದವರಿದ್ದರು.
ವಿಜ್ಞಾನ ಶಿಕ್ಷಕ ಮೋಹನ ನಾಯ್ಕ ವಿಜ್ಞಾನ ವಸ್ತು ಪ್ರದರ್ಶನಕ್ಕೆ, ಗಣಿತ ವಸ್ತು ಪ್ರದರ್ಶನಕ್ಕೆ ಗಣಿತ ಶಿಕ್ಷಕಿ ಸುಷ್ಮಾ, ಶಾಹಿಸ್ತಾ ಕೋಟೆಬಾಗಿಲ್ ಮಾರ್ಗದರ್ಶನ ನೀಡಿದ್ದರು. ಸಂಗೀತ ಶಿಕ್ಷಕಿ ಉಷಾ ಯು. ರಂಗೋತ್ಸವದ ಆಯೋಜನೆ ಮಾಡಿದ್ದರು