ಕಲಿಕಾ ಆಂದೋಲನದಿಂದ ಗಣಿತ ಪರಿಕಲ್ಪನೆ

IMG20240831201650.jpg
Published on

ಬೆಳಗಾವಿ: ತಾಲೂಕಿನ ಮಾಸ್ತಮರ್ಡಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ಕಲಿಕಾ ಆಂದೋಲನದ ಅಂಗವಾಗಿ ಗ್ರಾಪಂ ಮಟ್ಟದ ಶಾಲಾ ಮಕ್ಕಳ ಗಣಿತ ಪರೀಕ್ಷೆ ಕಾರ್ಯಕ್ರಮಕ್ಕೆ ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ಗುರಾಣಿ ಶನಿವಾರ ಚಾಲನೆ ನೀಡಿದರು.

ತಾಲೂಕು ನೋಡಲ್ ಅಧಿಕಾರಿ ಶಂಕರ ತಾರಾಪುರ ಮಾತನಾಡಿ, ಸಂಕಲನ, ವ್ಯವಕಲನ, ಭಾಗಾಕಾರ ಮತ್ತು ಗುಣಾಕಾರ ಲೆಕ್ಕಗಳು ನಿತ್ಯ ಜೀವನದಲ್ಲಿ ಹೇಗೆ ಅವಶ್ಯ ಹಾಗೂ ಉಪಯುಕ್ತವಾಗಿವೆ ಎಂಬ ಪರಿಕಲ್ಪನೆಯನ್ನು ಮಕ್ಕಳಲ್ಲಿ ಕರಗತ ಮಾಡಲು ಈ ಕಾರ್ಯಕ್ರಮ ಜಾರಿಗೊಳಿಸಲಾಗಿದೆ ಎಂದರು.

ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ 4, 5 ಮತ್ತು 6ನೇ ತರಗತಿ ಮಕ್ಕಳಿಗೆ ಅಭಿನಂದನಾ ಪ್ರಮಾಣಪತ್ರ ಹಾಗೂ ಸ್ವಯಂ ಸೇವಕರಿಗೆ ಪ್ರಶಂಸನೀಯ ಪ್ರಮಾಣಪತ್ರ ವಿತರಿಸಲಾಯಿತು.

ಮುಖ್ಯ ಶಿಕ್ಷಕ ಬಸವರಾಜ ಸುಣಗಾರ, ಶಿಕ್ಷಕರಾದ ಬಸವರಾಜ ಪಾಟೀಲ, ಭಾರತಿ ಇಂಗನಹಳ್ಳಿ, ವಿಜಯಲಕ್ಷ್ಮೀ ಕೋಸ್ಟಿ, ವೈಶಾಲಿ ಪೋಳ ಇತರರಿದ್ದರು. ಪ್ರೇಮಾ ಜವಳಿ ನಿರೂಪಿಸಿದರು. ಗೀತಾ ತೆಗ್ಗಿನಮನಿ ವಂದಿಸಿದರು.

ಬೆಳಗಾವಿ ತಾಲೂಕಿನ ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮದ ನಿಮಿತ್ತ 4, 5, 6ನೇ ತರಗತಿ ಮಕ್ಕಳಿಗೆ ಗಣಿತ ಪರೀಕ್ಷೆ ನಡೆಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ದೊಡ್ಡಯ್ಯ ಹಿರೇಮಠ ಚಾಲನೆ ನೀಡಿದರು. ಎಸ್‌ಡಿಎಂಸಿ ಸದಸ್ಯ ಜಗದೀಶ ಪೂಜೇರಿ, ಮುಖ್ಯ ಶಿಕ್ಷಕ ಉಮೇಶ ಕೋಲಕಾರ, ರಮೇಶ ಮುನಿಯಪ್ಪನವರ. ನಿರ್ಮಲ ಸೋಗಲಮಠ, ಸರಿತಾ ಮಳಗಲಿ, ಮಂಜುನಾಥ ಪಾಟೀಲ, ಅನ್ನಪೂರ್ಣ ಚಚಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net