

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಶ್ರೀಯಾ ಕಾಲೇಜು ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆರೋಗ್ಯಕರ ಆರಂಭ ಮತ್ತು ಭರವಸೆಯ ಭವಿಷ್ಯ ಎಂಭ ಧ್ಯೇಯದೊಂದಿಗೆ ಸತ್ತೂರಿನ ಶ್ರೀಯಾ ಕಾಲೇಜಿನಲ್ಲಿ ವಿಶ್ವ ಆರೋಗ್ಯ ದಿನ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಅತಿಥಿಯಾಗಿ ಆಗಮಿಸಿದ್ದ ಡಾ. ಮಹೇಶ ಚಿತ್ತರಗಿ ಮಾತನಾಡಿ, ತಾಯಂದಿರು ಮತ್ತು ಶಿಶುಗಳ ಮರಣ ಪ್ರಮಾಣ ತಡೆಗಟ್ಟಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ತನುಜಾ ನಾಯಕ ಮಾತನಾಡಿ, ಆರೋಗ್ಯ ಕಾಪಾಡಿಕೂಳ್ಳುವ ವಿಧಾನ, ನಮ್ಮ ಜೀವನ ಶೈಲಿ ಸುಧಾರಿಸುಕೊಳ್ಳುವ ಬಗೆ ವಿವರಿಸಿದರು.
ಡಾ. ಬಿ.ಆರ್. ಪಾತ್ರೋಟ ಮಾತನಾಡಿ, ಕಲಬೆರಿಕೆ ಆಹಾರದಿಂದ ಎದುರಾಗುವ ರೋಗಗಳು ಹಾಗೂ ದೈನಂದಿನ ಆಹಾರದಲ್ಲಿ ಬದಲಾವಣೆ ತರುವ ಮಾಹಿತಿ ನೀಡಿದರು.
ಡಾ. ಮಜ್ಜಿಗಿ, ಕಾಲೇಜಿ ಪ್ರಾಂಶುಪಾಲೆ ಡಾ. ರೋಡಾ ಜೇಸುರಾಜ ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ, ಇತರರು ಇದ್ದರು.
ನಿಖಿತಾ ನಿರೂಪಿಸಿದರು. ರಮೇಶ ನವಲಗುಂದ ವಂದಿಸಿದರು.