

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೆ. ಇ. ಬೋರ್ಡ ಅಂಗ ಸಂಸ್ಥೆಯಾದ ಇಲ್ಲಿನ ಮಾಳಮಡ್ಡಿಯ ಕೆ.ಇ. ಬೋರ್ಡ ಸೆಂಟ್ರಲ್ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ನಿಮಿತ್ತ ಆ. 14ರಂದು ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ ದಿವ್ಯ ಪ್ರಭು ಪ್ರದರ್ಶನ ಉದ್ಘಾಟಿಸುವರು. ಅತಿಥಿಗಳಾಗಿ ಶ್ರೀಕಾಂತ ಪಾಟೀಲ, ಡಿ.ಎಸ್. ರಾಜಪುರೋಹಿತ, ಎನ್.ಎಸ್. ಕುಲಕರ್ಣಿ, ಡಾ. ಆರ್.ವೈ. ಕಟ್ಟಿ ಆಗಮಿಸಲಿದ್ದಾರೆ. ಕೆ.ಇ. ಬೋರ್ಡ್ ಅಧ್ಯಕ್ಷ ಪ್ರೊ. ಮಹಾದೇವ ಜೋಶಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.