ವಚನಗಳ ಆಶಯವೇ ಸಂವಿಧಾನ

IMG20240331131429
Published on

ಕಲಬುರಗಿ: ವಚನಗಳು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಂವಿಧಾನ ರಚನೆಗಿಂತ ಮೊದಲೇ ದೊರಕಿದ್ದರೇ ಅದನ್ನೆ ಸಂವಿಧಾನ ಎಂದು ಘೋಷಿಸುತ್ತಿದ್ದರೇನೋ ಎಂದು ಸಿ.ಎಸ್ ದ್ವಾರಕನಾಥ ಹೇಳಿದರು.

ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ರಾಷ್ಟ್ರೀಯ ಬಸವದಳದಿಂದ ಏರ್ಪಡಿಸಿದ್ದ ಪೂಜ್ಯ ಮಾತೆ ಮಹಾದೇವಿ ಸಂಸ್ಮರಣೋತ್ಸವದಲ್ಲಿ ಮಾತನಾಡಿ, ಸಂವಿಧಾನದ ಪ್ರತಿ ಅನುಚ್ಛೇದಗಳು, ವಚನಗಳು ಒಂದೇ ಆಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಜಾತಿಗಳನ್ನು ಜೋಡಿಸುವ ಪರಿಕಲ್ಪನೆ ಸೃಷ್ಟಿಸಿ, ಜಾತಿ ವಿನಾಶಕ್ಕೆ ಮುಂದಡಿ ಇಟ್ಟವರು ಬಸವಾದಿ ಶರಣರು ಎಂದು ಹೇಳಿದರು.

ಶ್ರೀ ಚನ್ನಬಸವಾನಂದ ಸ್ವಾಮೀಜಿ, ಶ್ರೀ ಮಾತೆ ಸತ್ಯಾದೇವಿ, ಡಾ.ಮಹೇಶ್ ಬಿರಾದಾರ, ಪ್ರಕಾಶ ಜಮಾದಾರ, ಶ್ರೀಶೈಲ ಮಸೂತಿ, ಅಭಿಷೇಕ ಪಾಟೀಲ್, ಪಪ್ಪು ಪಟೇಲ್, ಶೋಭಾ ಸಿರಸಗಿ, ಶಿವರಾಜ್ ಪಾಟೀಲ್ ಅತಿವಾಳ, ಜಗದೇವಿ ಚಟ್ಟಿ, ಸಂತೋಷ ಕಟಾಳೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net