ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಶಾಸಕ ಸಂಜೀವ ಮಠಂದೂರು ಪತ್ರ

WhatsApp Image 2024-05-27 at 17.16.53_ccccae56
Published on

ಪುತ್ತೂರು: ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಪ್ರಧಾನಮಂತ್ರಿ ಫಸಲ್ ವಿಮೆ ಹಾಗೂ ಹವಾಮಾನ ಆಧಾರಿತ ವಿಮೆಯನ್ನು ೨೦೨೪-೨೫ ನೇ ಸಾಲಿನ ಕಂತು ಪಾವತಿಯ ಆದೇಶವನ್ನು ಕರ್ನಾಟಕ ಸರ್ಕಾರ ತಕ್ಷಣ ಹೊರಡಿಸಬೇಕೆಂದು ಆಗ್ರಹಿಸಿ ಮಾಜಿ ಶಾಸಕ ಸಂಜೀವ ಮಠಂದೂರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಮುಂಗಾರಿಗೆ ರಾಜ್ಯ ಸರ್ಕಾರದ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ರೈತರ ವಿಮೆ ಪ್ರೀಮಿಯಂ ಕಂತು ಕಟ್ಟಲು ಜೂನ್ ತಿಂಗಳಲ್ಲಿ ಆದೇಶ ಮಾಡುತ್ತಿತ್ತು. ಪಕ್ಕದ ಕೇರಳ ಸರ್ಕಾರ ಈಗಾಗಲೇ ಈ ಆದೇಶವನ್ನು ಹೊರಡಿಸಿದ್ದು, ಕರ್ನಾಟದಲ್ಲಿ ಇನ್ನೂ ಆದೇಶವಾಗಿಲ್ಲ. ದಕ್ಷಿಣ ಕನ್ನಡದಲ್ಲಿ ಮಳೆ ಪ್ರಾರಂಭವಾಗಿದ್ದು, ಕೃಷಿಕರು ಬೆಳೆ ರಕ್ಷಣೆಯ ಬಗ್ಗೆ ಆಂತಕದಲ್ಲಿದ್ದಾರೆ. ಜೂನ್ ನಲ್ಲೇ ಕಂತು ಪಾವತಿಗೆ ಹಾಗೂ ಯೋಜನೆಯ ಪ್ರತಿಫಲವನ್ನು ದೊರಕಿಸಿ ಕೊಡುವ ಕೆಲಸ ಮಾಡಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಕೃಷಿಕರಿಗೆ ಕಿಸಾನ್ ಸಮ್ಮಾನ್ ನಿಧಿ ಪಾವತಿಯಾಗುತ್ತಿಲ್ಲ, ಹಾಲಿನ ಸಬ್ಸಿಡಿ ಬಿಡುಗಡೆಯಾಗುತ್ತಿಲ್ಲ, ರೈತ ವಿದ್ಯಾನಿಧಿ ಕೊಟ್ಟಿಲ್ಲ, ಬಜೆಟ್ ನಲ್ಲಿ ಘೋಷಣೆ ಮಾಡಿದ ಸಾಲ ಮನ್ನಾ, ಶೂನ್ಯ ಬಡ್ಡಿ ಹಾಗೂ ಶೇ.೩ರ ಹೆಚ್ಚುವರಿ ಸಾಲ ಇನ್ನೂ ರೈತರಿಗೆ ಸಹಕಾರಿ ಸಂಘಗಳು ಕೊಡುತ್ತಿಲ್ಲ. ಕರ್ನಾಟದಲ್ಲಿ ಕಾಂಗ್ರೆಸ್ಸ್ ಸರ್ಕಾರ ಬಂದ ಬಳಿಕ ಕೃಷಿಕರಿಗೆ ನಿರಂತರ ಅನ್ಯಾಯ ಆಗುತ್ತಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net