ಕಾಯಕದಲ್ಲಿರಲಿ ಸತ್ಯ, ಶುದ್ಧತೆ; ಬಸವರಾಜ ಹೂಗಾರ

12 Ylb 02
ಯಲಬುರ್ಗಾ ತಾಲೂಕಿನ ಮಾಟಲದಿನ್ನಿಯಲ್ಲಿ ಹಮ್ಮಿಕೊಂಡಿದ್ದ ಲಿ.ಸಂಗನಗೌಡ ಜಾಲಿಹಾಳ ಸಂಸ್ಮರಣೆ ಮತ್ತು ವಚನ ಚಿಂತನ ಕಾರ್ಯಕ್ರಮದಲ್ಲಿ ಪ್ರಮುಖರಾದ ರೇಣುಕಪ್ಪ ಮಂತ್ರಿ, ಹನುಮಗೌಡ ಬಳ್ಳಾರಿ, ಬಸವರಾಜ ಹೂಗಾರ, ಹನುಮಂತಪ್ಪ ಬೇರಗಿ, ಭೀಮನಗೌಡ ಜಾಲಿಹಾಳ, ಲಿಂಗನಗೌಡ ಇದ್ದರು.
Published on

ಯಲಬುರ್ಗಾ: ಮಾಡುವ ಕಾಯಕದಲ್ಲಿ ಸತ್ಯ, ಶುದ್ಧತೆ ಅಳವಡಿಸಿಕೊಳ್ಳಬೇಕು ಎಂದು ಬಸವದಳದ ಕಾರ್ಯದರ್ಶಿ ಬಸವರಾಜ ಹೂಗಾರ ಹೇಳಿದರು.


ತಾಲೂಕಿನ ಮಾಟಲದಿನ್ನಿ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳದಿಂದ ಮಂಗಳವಾರ ಹಮ್ಮಿಕೊಂಡಿದ್ದ ಲಿ.ಸಂಗನಗೌಡ ಜಾಲಿಹಾಳ ಸಂಸ್ಮರಣೆ ಮತ್ತು ವಚನ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಾದಿ ಶರಣರ ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಸಾರ್ಥಕ ಜೀವನ ಲಭಿಸಲಿದೆ ಎಂದರು.


ರಾಯಚೂರಿನ ಬಸವಕೇಂದ್ರದ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಕುರಕುಂದ, ಪ್ರಮುಖರಾದ ಬಸವರಾಜಪ್ಪ ಇಂಗಳದಾಳ, ರೇಣುಕಪ್ಪ ಮಂತ್ರಿ, ಹನುಮಗೌಡ ಬಳ್ಳಾರಿ, ಹನಮಂತಪ್ಪ ಬೇರಗಿ, ಭೀಮನಗೌಡ ಜಾಲಿಹಾಳ, ಲಿಂಗನಗೌಡ ಕಡಿವಾಲ, ಮಲ್ಲೇಶಪ್ಪ ಟೈಲರ್, ಶರಣಪ್ಪ ಕೋರಿ, ಮಂಜುನಾಥ ಉಚ್ಚಲಕುಂಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net