ಮಾತಾ ಅಮೃತಾನಂದಮಯಿ ಮಠ ಗಡಿ ಕಾಯುವ ಯೋಧರಿಗಾಗಿ ವಿಶೇಷ ಪ್ರಾರ್ಥನೆ

mng--11 may Amuruthanadami mata
Published on

ಮಂಗಳೂರು: ಭಾರತೀಯ ಸೇನೆಯು ಗಡಿಯಲ್ಲಿ ಶತ್ರು ರಾಷ್ಟ್ರದ ವಿವಿಧ ರೀತಿಯ ದಾಳಿಗಳನ್ನು ಸಮರ್ಥವಾಗಿ ಎದುರಿಸುತ್ತಾ ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ಶ್ರಮಿಸುತ್ತಿರುವ ಯೋಧರಿಗೆ ದೇವರು ಅನುಗ್ರಹ ಪ್ರಾಪ್ತಿಯಾಗಿ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರ ಉಪಸ್ಥಿತಿಯಲ್ಲಿ ಲೋಕ ಕಲ್ಯಾಣಾರ್ಥ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಸುಮಂಗಲೆಯರು ಅಮೃತ ಜ್ಯೋತಿ, ಪುಷ್ಪ ಹಾಗೂ ಕುಂಕುಮಗಳೊಂದಿಗೆ ಲೋಕ ಕಲ್ಯಾಣಕ್ಕಾಗಿ ಪ್ರದಕ್ಷಿಣೆಯೊಂದಿಗೆ ಸಾಮೂಹಿಕ ಪ್ರಾರ್ಥನೆ ಮಾಡಿದರು. ದೇಶದ ಸೇನೆಯಲ್ಲಿ ಸೇವೆಗೈದ ನಿವೃತ್ತ ಸೇನಾನಿಗಳು ಭಾಗವಹಿಸಿದ್ದರು. ವಾಯು ಸೇನೆಯ ನಿವೃತ್ತ ಯಶವಂತ ಗೋಪಾಲ ಶೆಟ್ಟಿ, ನೌಕಾಪಡೆಯ ನಿವೃತ್ತ ಕಮಾಂಡರ್ ಜಯರಾಂ ನೋಂಡ ಮತ್ತು ಭೂಸೇನೆಯ ಲ್ಯಾನ್ಸ್ ದಫೇದಾರ್ ಸೋಮಶೇಖರ್ ಇವರುಗಳನ್ನು ಈ ಸಂದರ್ಭದಲ್ಲಿ ಮೂರೂ ಸೇನೆಗಳಿಗೆ ಗೌರವಾರ್ಪಣೆಯ ಸಂಕೇತವಾಗಿ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಸನ್ಮಾನಿಸಲಾಯಿತು.

ಯಶವಂತ ಶೆಟ್ಟಿ ಅವರು ಮಾತನಾಡಿ, ನಮ್ಮ ಸೇನೆಯಲ್ಲಿ ಮಂಗಳೂರಿನ ಐವರು ಸೇವಾನಿರತರಾಗಿದ್ದಾರೆ. ಅದರಲ್ಲೂ ನಾಲ್ಕು ಮಹಿಳೆಯರು ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಈ ದಿವ್ಯ ಕ್ಷೇತ್ರದಲ್ಲಿ ಭಾರತೀಯ ಸೇನೆಯವರಿಗಾಗಿ ವಿಶೇಷ ಪ್ರಾರ್ಥನೆ ಹಮ್ಮಿಕೊಂಡಿರುವುದು ಅತ್ಯಂತ ಅರ್ಥ ಪೂರ್ಣ ಎಂದರು.

ಸಾಮೂಹಿಕ ಶನಿದೋಷ ನಿವಾರಣಾ ಪೂಜೆಯ ನಂತರ ನಡೆದ ಈ ಸರಳ ಕಾರ್ಯಕ್ರಮದಲ್ಲಿ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್, ಗೌರವಾಧ್ಯಕ್ಷರುಗಳಾದ ಡಾ.ಜೀವರಾಜ್ ಸೊರಕೆ, ಡಾ.ವೈ.ಸನತ್ ಹೆಗ್ಡೆ,ಶ್ರುತಿ ಸನತ್ ಹೆಗ್ಡೆ , ಸೇವಾ ಸಮಿತಿಯ ಪದಾಧಿಕಾರಿಗಳು, ಭೋಜರಾಜ್ ಕರ್ಕೇರ, ಬ್ರಹ್ಮಸ್ಥಾನಂ ಕ್ಷೇತ್ರದ ಪದಾಧಿಕಾರಿಗಳು, ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net