ಜೂ.6ರಂದು ಮಾಸ್ತಿ ವೆಂಕಟೇಶ್​ ಅಯ್ಯಂಗಾರ್​ ಜಯಂತಿ

23 KLR 02
Published on

ಕೋಲಾರ; ಜಿಲ್ಲಾಡಳಿತ, ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಡಾ.ಮಾಸ್ತಿ ವೆಂಕಟೇಶ್​ ಅಯ್ಯಂಗಾರ್​ ಟ್ರಸ್ಟ್​ನಿಂದ ಜೂ. 6ರಂದು ಮಾಲೂರು ತಾಲೂಕು ಮಾಸ್ತಿ ಗ್ರಾಮದಲ್ಲಿ ಡಾ.ಮಾಸ್ತಿ ವೆಂಕಟೇಶ್​ ಅಯ್ಯಂಗಾರ್​ ಅವರ 134ನೇ ಜಯಂತಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕನ್ನಡದ ಸಣ್ಣ ಕಥೆಗಳ ಜನಕರೆಂದೇ ಖ್ಯಾತಿ ಹೊಂದಿದ್ದ ಮಾಸ್ತಿ ಅವರು ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡವನ್ನು ಹೃದಯ ಭಾಷೆಯಾಗಿ ಜೀವಂತ ವಿರಿಸಿಕೊಂಡವರು. ಕನ್ನಡದ ಆಸ್ತಿ ಎನಿಸಿಕೊಂಡಿದ್ದ ಮಾಸ್ತಿ ಅವರು ಕೇವಲ ಸಾಹಿತ್ಯ ಕೃಷಿಯಿಂದಲ್ಲ, ಕನ್ನಡದ ಮನಸ್ಸುಗಳನ್ನು, ಲೇಖಕರನ್ನು, ಕವಿಗಳನ್ನು ಘೋಷಿಸಿ ಕನ್ನಡದ ಅಸ್ಮಿತೆಯನ್ನು ಎತ್ತರಕ್ಕೆ ಏರಿಸಿರುವುದರ ಜತೆಗೆ ಮೈಸೂರು ಸರ್ಕಾರದ ಅಸಿಸ್ಟೆಂಟ್​ ಕಮಿಷನರ್​ ಆಗಿಯೂ ಸೇವೆ ಸಲ್ಲಿಸಿದ್ದಾರೆ ಎಂದರು.

ಕನ್ನಡ ಮತ್ತು ಸಂಸತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್​ ಛಲವಾದಿ, ಸಹಾಯಕ ನಿರ್ದೇಶಕರಾದ ವಿಜಯಲಕ್ಷಿ$್ಮ, ಮಾಲೂರು ತಹಸೀಲ್ದಾರ್​ ರೂಪಾ, ಟ್ರಸ್ಟಿಗಳಾದ ವೆಂಕಟಾಚಲಪತಿ, ಕನ್ನಡ ಸಾಹಿತ್ಯ ಪರಿಷತ್​ ಗೌರವ ಕಾರ್ಯದರ್ಶಿ ಡಾ.ಶಂಕರಪ್ಪ ಇದ್ದರು.

ಪುತ್ಥಳಿ ಅನಾವರಣ

ಮಾಸ್ತಿ ಅವರ ಮನೆಯ ಆವರಣದಲ್ಲಿ ದಾನಿಗಳು ನೀಡಿರುವ ಪುತ್ಥಳಿ ಅನಾವರಣ ಮಾಡಿ, ನಂತರ ಸ್ತಬ್ಧಚಿತ್ರಗಳ ಮೆರವಣಿಗೆಯನ್ನು ಅಂದು 10.30 ಚಾಲನೆ ನೀಡಲಾಗುವುದು. 11.30ರಿಂದ 12.30ರವರೆಗೆ ಮಕ್ಕಳ ಕವಿಗೋಷ್ಠಿ,

ಮಧ್ಯಾಹ್ನ 1 ಗಂಟೆಗೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು, ಸಂಸದರು, ಜನಪ್ರತಿನಿಧಿಗಳು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಡಿಸಿ ತಿಳಿಸಿದರು. ಇನ್ನು ಕವಿಗೋಷ್ಠಿಗಾಗಿ ಸಮಿತಿ ರಚಿಸಲಾಗಿದ್ದು, ತಾಲೂಕುಮಟ್ಟದ ಮಕ್ಕಳಿಗೆ ಅಧಿಕಾರಿಗಳು ಮಾರ್ಗದರ್ಶನ ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net