ಮಾಸ್ತಿ ಮಾರೆಮ್ಮದೇವಿ ಜಾತ್ರೆ 19ರಂದು

Published on

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಸಾಯಿನಗರ ಹೆಬ್ಬಳ್ಳಿ ರೈಲ್ವೆ ಗೇಟ್ ಹತ್ತಿರದ ಮಾಸ್ತಿ ಮಾರೆಮ್ಮ ಕಾಲನಿಯಲ್ಲಿರುವ ಮಾಸ್ತಿ ಮಾರೆಮ್ಮ ದೇವಿ 10ನೇ ಜಾತ್ರಾ ಮಹೋತ್ಸವ ಆ. 19ರಂದು ಏರ್ಪಡಿಸಲಾಗಿದೆ.

ಶ್ರೀ ಮಾಸ್ತಿ ಮಾರೆಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಶ್ರಾವಣ ಕೊನೇ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 5ಕ್ಕೆ ದೇವಿಗೆ ಮಹಾಅಭಿಷೇಕ, ಉಡಿ ತುಂಬುವುದು, ಕೋಲಾಟ, ಡೊಳ್ಳಿನ ಮೆರವಣಿಗೆ ನಡೆಯಲಿದೆ.

ಬೆಳಗ್ಗೆ 9.30ಕ್ಕೆ ದೇವಿಯ ಪಲ್ಲಕ್ಕಿ ಉತ್ಸವ ದೇವಸ್ಥಾನದಿಂದ ಹೊರಟು ಸಾಯಿನಗರ, ಉಣಕಲ್ಲ ಗ್ರಾಮದಲ್ಲಿ ಸಂಚರಿಸಿ ಎಲ್ಲ ದೇವರಿಗೆ ಕಾಯಿ ಕರ್ಪೂರ ಮತ್ತು ಉಡಿ ತುಂಬಿಕೊಂಡು ಮರಳಿ ದೇವಸ್ಥಾನಕ್ಕೆ ಬರಲಿದೆ. ಮಧ್ಯಾಹ್ನ ಅನ್ನಪ್ರಸಾದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net