ಉತ್ತಮ ಬದುಕಿಗೆ ಮಾಸ್ತಿ ಸಾಹಿತ್ಯ ಪ್ರೇರಣೆ

Masti literature inspires for a better life
ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್​ ಜಯಂತಿ ಆಚರಿಸಲಾಯಿತು. ಸಂತೋಷ ಬಂಡೆ, ಮಂಜುನಾಥ ಗಂಗನಳ್ಳಿ, ರಾು ಮೊಗಳ ಮತ್ತಿತರರಿದ್ದಾರೆ.
Published on

ವಿಜಯಪುರ : ಮಾಸ್ತಿ ಅವರು ಸಣ್ಣಕಥೆಗಳ ಹರಿಕಾರರಾಗಿ ಹಳ್ಳಿಯ ಬದುಕು, ರೈತ, ಪರಿಸರ, ಜನರ ಸಂಸತಿ ಆಚಾರ&ವಿಚಾರದ ಬಗ್ಗೆ ತಮ್ಮ ಸಾಹಿತ್ಯದ ಮೂಲಕ ಬಿಂಬಿಸಿದ್ದಾರೆ. ಉತ್ತಮ ಬದುಕು ಕಟ್ಟಿಕೊಳ್ಳಲು ಮಾಸ್ತಿ ಅವರ ಸಾಹಿತ್ಯ ಪ್ರೇರಣೆಯಾಗಿದೆ ಎಂದು ಶಿಕ ಸಂತೋಷ ಬಂಡೆ ಹೇಳಿದರು.

ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್​ ಅವರ ಜಯಂತಿ ಅಂಗವಾಗಿ ಶುಕ್ರವಾರ

ಹಮ್ಮಿಕೊಂಡಿದ್ದ ಮಾಸ್ತಿ: ಬದುಕು ಬರಹ' ಕುರಿತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಮಾಸ್ತಿ ವೆಂಕಟೇಶ ಅಯ್ಯಂಗಾರ್​ ಅವರ ಸಾಹಿತ್ಯ ನಮ್ಮ ನಿಜವಾದ ಆಸ್ತಿ. ಮಾಸ್ತಿ ಕನ್ನಡದ ಆಸ್ತಿ ಎಂಬ ಮಾತು ನಿಜವಾಗಬೇಕಾದರೆ ಪ್ರತಿಯೊಬ್ಬ ಪ್ರಜೆ ಮಾಸ್ತಿ ಅವರ ಸಾಹಿತ್ಯ ಓದಬೇಕು ಎಂದರು. ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮತ್ತು ಶಿಕ ರಾು ಮೊಗಳ ಮಾತನಾಡಿದರು. ಗ್ರಾಮದ ರಾಜು ಕತ್ನಳ್ಳಿ, ಆನಂದ ಗಂಗನಳ್ಳಿ, ಶಂಕರ ಮಾನೆ, ಪ್ರವಿಣ ಕೊಣಶಿರಸಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net