

ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಶನಿವಾರದಿಂದ ಆರಂಭಗೊಂಡ ರಾಜ್ಯ ಮಟ್ಟದ 42ನೇ ಮಾಸ್ಟರ್ಸ್ ಅಥ್ಲಿಟಿಕ್ಸ್‌ನಲ್ಲಿ ವಿಜಯವಾಣಿ ಮಂಗಳೂರು ಕಚೇರಿಯ ಸಹಾಯಕ ವ್ಯವಸ್ಥಾಪಕ (ಆಡಳಿತ) ಕಿರಣ್ ಪೈ ಅವರು 35 ವರ್ಷ ಮೇಲ್ಪಟ್ಟವರ ವಿಭಾಗದ ಡಿಸ್ಕಸ್ ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಇವರ ತರಬೇತುದಾರ ಖೇಲೋ ಇಂಡಿಯಾ ಹ್ಯಾಮರ್ ತ್ರೋ ಪ್ರಶಸ್ತಿ ವಿಜೇತ ಯಮನೂರಪ್ಪ ಆರ್.ವಿ. ಸ್ಮರಣಿಕೆ ಹಾಗೂ ಪ್ರಮಾಣಪತ್ರ ಪ್ರದಾನ ಮಾಡಿದರು.