ಬೃಹತ್ ಲಿಖಿತ ಸಂವಿಧಾನ ಜಗತ್ತಿಗೆ ಮಾದರಿ

26 SND 06
ಸಿಂಧನೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು.
Published on

ಸಿಂಧನೂರು: ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಜಗತ್ತಿಗೆ ಮಾದರಿ ಹಾಗೂ ಶ್ರೇಷ್ಠ ಸಂವಿಧಾನವಾಗಿದೆ ಎಂದು ಪ್ರಾಚಾರ್ಯೆ ಡಾ. ಲಕ್ಷ್ಮೀದೇವಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ರೂಢಿಸಿಕೊಂಡು ಸತ್ಪ್ರಜೆಗಳಾಗಬೇಕು ಎಂದರು.

ಪ್ರಾಧ್ಯಾಪಕ ನೂರ್‌ಬಾಷಾ ಮಾತನಾಡಿ, ಭಾರತೀಯರಿಗೆ ಸಂವಿಧಾನ ಸ್ವತಂತ್ರ, ಸಹಬಾಳ್ವೆಯಿಂದ ಜೀವಿಸಲು ಅನುವುಮಾಡಿಕೊಟ್ಟಿದೆ. ಸಂವಿಧಾನ ವಿರೋಧಿಸುವವರು ದೇಶದ್ರೋಹಿಗಳು, ಅನುಸರಿಸುವವರು ದೇಶಪ್ರೇಮಿಗಳು ಎಂದರು. ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಹಾಯಕ ಪ್ರಾಧ್ಯಾಪಕರಾದ ಡಾ.ರೇಣುಕಾ ರೆಡ್ಡಿ, ಡಾ.ಮದಗಪ್ಪ, ಡಾ.ಬಸವರಾಜ ಬಳಿಗೇರ, ತ್ರಿಕುಮಾರ, ಪಂಪಣ್ಣ ಸಜ್ಜನ್, ಚಿದಾನಂದಪ್ಪ ಶ್ರೀಪುರಂಜಂಕ್ಷನ್, ಶಂಕರ ವಾಲೀಕಾರ, ಮಹಾಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net