ಕೇಸರಿಮಯವಾದ ರೇಷ್ಮೆನಗರಿ ರಾಮನಗರ; ನಾಳೆ ಬೃಹತ್ ಪಥ ಸಂಚಲನ

Ramnagra rss 1
Published on

ರಾಮನಗರ: ನಗರದಲ್ಲಿ ಭಾನುವಾರ (ಫೆ.9) ನಡೆಯಲಿರುವ ಜಿಲ್ಲಾಮಟ್ಟದ ಆರ್​ಎಸ್​ಎಸ್ ಪಥಸಂಚಲನದಲ್ಲಿ 5 ಸಾವಿರ ಗಣವೇಷಧಾರಿಗಳು ಭಾಗವಹಿಸಲಿದ್ದಾರೆ. ಪಥಸಂಚಲನ ಹಿನ್ನೆಲೆಯಲ್ಲಿ ನಗರದ ರಸ್ತೆಗಳು ಸಿಂಗಾರಗೊಂಡಿದ್ದು, ಕೇಸರಿಮಯವಾಗಿವೆ.

ಎರಡು ಮಾರ್ಗದಲ್ಲಿ ಪಥಸಂಚಲನ ನಡೆಯಲಿದೆ. ನಂತರ ಜೂನಿಯರ್ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯುವ ಸಮಾವೇಶದಲ್ಲಿ ಆರ್​ಎಸ್​ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ ಭಟ್ ಭಾಷಣ ಮಾಡಲಿದ್ದಾರೆ.

ಗಣವೇಷಧಾರಿ ಸಿಪಿವೈ: ಯೋಗೇಶ್ವರ್ ಶುಕ್ರವಾರ ಅಧಿಕೃತ ಫೇಸ್​ಬುಕ್ ಪೇಜ್​ನಲ್ಲಿ ಪುತ್ರರಾದ ಶ್ರವಣ್ ಮತ್ತು ಧ್ಯಾನ್ ಜತೆಗೆ ಗಣವೇಷಧಾರಿಗಳಾಗಿ ನಿಂತಿರುವ ಪೋಟೋಗಳು ವೈರಲ್ ಆಗಿವೆ. ‘ದೇಶ ಮೊದಲು, ಅಧಿಕಾರವಲ್ಲ’ ಎಂಬ ಹ್ಯಾಶ್​ಟ್ಯಾಗ್​ನೊಂದಿಗೆ ಪೋಸ್ಟ್ ಮಾಡಲಾಗಿದೆ. ಇದೇ ಪೋಟೋವನ್ನು ಯೋಗೇಶ್ವರ್ ತಮ್ಮ ಟ್ವಿಟರ್ ಖಾತೆಯಲ್ಲೂ ಪೋಸ್ಟ್ ಮಾಡಿದ್ದಾರೆ.

15 ದಿನಗಳಿಂದ ಪಥಸಂಚಲನ ನಡೆಸಲು ಸಿದ್ಧತೆ ಮಾಡಲಾಗುತ್ತಿದೆ.ಯೋಗೇಶ್ವರ್ ಸಹೋದರ ಸಿ.ಪಿ. ರಾಜೇಶ್ ಸೇರಿ ಬಿಜೆಪಿ ಮುಖಂಡರು ಕಾರ್ಯಕರ್ತರನ್ನು ಅಣಿಗೊಳಿಸುತ್ತಿದ್ದಾರೆ. ಆದರೆ, ಯೋಗೇಶ್ವರ್​ಗೆ ಸಚಿವ ಸ್ಥಾನ ತಪ್ಪಿದ ಬೆನ್ನಲ್ಲೇ ಕೆಲ ಕಾರ್ಯಕರ್ತರಲ್ಲಿ ಬೇಸರ ಮನೆಮಾಡಿದೆ. ಇದು ಪಥಸಂಚಲನದ ಮೇಲೆ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಯೋಗೇಶ್ವರ್ ಈ ಪೋಸ್ಟ್ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದೇಶ ಕಟ್ಟುವ ಕಾರ್ಯದಲ್ಲಿ ಆರ್​ಎಸ್​ಎಸ್ ತೊಡಗಿಸಿ ಕೊಂಡಿದೆ. ಪ್ರತಿಯೊಬ್ಬರೂ ಇಂತಹ ಮಹಾನ್ ಸಂಘಟನೆಯಲ್ಲಿ ಪಾಲುದಾರರಾಗಬೇಕು. | ವರದರಾಜುಗೌಡ ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿಲ್ಲೆಯ ಇತಿಹಾಸದಲ್ಲಿಯೇ ಆರ್​ಎಸ್​ಎಸ್​ನ ಬೃಹತ್ ಪಥ ಸಂಚಲನ ನಡೆಯಲಿದೆ. ಪಕ್ಷಾತೀತವಾಗಿ ದೇಶಭಕ್ತರು ದಲ್ಲಿ ಪಾಲ್ಗೊಳ್ಳಲಿ ದ್ದಾರೆ. ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು. | ಎಂ. ರುದ್ರೇಶ್, ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net