ಸೆ.10ಕ್ಕೆ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ

ಎಸ್.ಪಿ.ಲಿಂಬ್ಯಾನಾಯ್ಕ
ಎಸ್.ಪಿ.ಲಿಂಬ್ಯಾನಾಯ್ಕ
Published on

ಹರಪನಹಳ್ಳಿ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಅವೈಜ್ಞಾನಿಕ ವರ್ಗೀಕರಣ ಖಂಡಿಸಿ ಸೆ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೊಲಂಭೋ ಸಮುದಾಯದ ರಾಜ್ಯ ಸಮಿತಿ ಸದಸ್ಯ ಎಸ್.ಪಿ.ಲಿಂಬ್ಯಾನಾಯ್ಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಸುಪ್ರಿಂಕೋರ್ಟ್ ತೀರ್ಪಿನಲ್ಲಿ ಪಜಾ,ಪಪಂ ಪಟ್ಟಿಯಲ್ಲಿರುವ ಸಮುದಾಯಗಳಲ್ಲಿ ಶಿಕ್ಷಣ, ಉದ್ಯೋಗದಲ್ಲಿ ಹಿಂದುಳಿದಿರುವಿಕೆ ಸಾಬೀತು ಮಾಡಿ, ಅಧ್ಯಯನದ ಮೂಲಕ ನಿಖರ ದತ್ತಾಂಶ ಪತ್ತೆ ಹಚ್ಚಬೇಕು. ಆದರೆ, ಸರ್ಕಾರ ಅವಸರದಲ್ಲಿ ದೋಷಪೂರಿತ ದತ್ತಾಂಶ ಪರಿಗಣಿಸಿ ಒಳಮೀಸಲಾತಿ ಜಾರಿಗೊಳಿಸಿದೆ. ಹಿಂದೆ ಬಿಜೆಪಿ ಸರ್ಕಾರ ಪಜಾಗಳಿಗೆ ಮೀಸಲಾತಿ ಪ್ರಮಾಣ ಶೇ.15 ರಿಂದ ಶೇ.17ಕ್ಕೆ ಹೆಚ್ಚಳ ಮಾಡಿತ್ತು. ಬಂಜಾರ, ಭೋವಿ, ಕೊರಚ ಮತ್ತು ಕೊರಮ ಸಮುದಾಯಗಳಿಗೆ ಶೇ.4.5, ಇತರೆ ಅಲೆಮಾರಿ ಸಮುದಾಯದವರಗೆ ಶೇ.1 ಒಳಮೀಸಲಾತಿ ನೀಡಿತ್ತು. ಆದರೆ, ಪ್ರಸ್ತುತ ಕೊಲಂಭೋ ಹಾಗೂ ಅಲೆಮಾರಿ ಸಮುದಾಯಗಳನ್ನು ಒಟ್ಟಿಗೆ ಸೇರಿಸಿ ಶೇ.5ಮೀಸಲಾತಿ ನೀಡಿದೆ. ಆದ್ದರಿಂದ ಸರ್ಕಾರದ ವಿರುದ್ಧ ಹೋರಾಟ ಕೈಗೊಳ್ಳುತ್ತೇವೆ ಎಂದರು.

ಕೊರಚ ಸಮಾಜದ ತಾಲೂಕು ಅಧ್ಯಕ್ಷ ಹೊನ್ನಪ್ಪ, ತಾಪಂ ಮಾಜಿ ಉಪಾಧ್ಯಕ್ಷ ಎಲ್.ಮಂಜ್ಯಾನಾಯ್ಕ, ಪ್ರಮುಖರಾದ ಗಂಗಾನಾಯ್ಕ, ಪಂಪಾನಾಯ್ಕ, ಯಲ್ಲಾಪುರ ಕೆಂಚಪ್ಪ, ವರ‌್ಯಾನಾಯ್ಕಾ, ಗೋಪಿನಾಯ್ಕ, ವ್ಯಾಸನತಾಂಡ ಬಸವರಾಜನಾಯ್ಕ, ಎ.ರಾಜಕುಮಾರ, ಅಶೋಕ, ವೆಂಕಟೆಶನಾಯ್ಕ, ಜೋತಿನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net