

ರಾಯಚೂರು ಪರಿಶಿಷ್ಟಜಾತಿಗಳ ಉದ್ದೇಶಪೂರಿತ ಒಳಮೀಸಲು ಜಾರಿಗೆ ವಿಳಂಬನೀತಿ ಅನುರಿಸುತ್ತಿರುವ ರಾಜ್ಯ ಸರ್ಕಾರ ನಡೆಯನ್ನು ಖಂಡಿಸಿ ಮಾ.19 ರಂದು ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಮೆರವಣಿಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ಮಾದಿಗ ಸಮೂದಾಯಗಳ ಸ್ವಾಭಿಮಾನ ಒಕ್ಕೂಟದ ರಾಜ್ಯ ಸಂಚಾಲಕ ಜೆ.ಬಿ.ರಾಜು ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಚುನಾವಣೆಯ ವೇಳೆಯಲ್ಲಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಜಾರಿಗೆ ಬದ್ಧತೆ ತೋರುತ್ತಿಲ್ಲ. ಸುಪ್ರಿಂಕೋರ್ಟ ಆದೇಶ ನೀಡಿ ಏಳು ತಿಂಗಳು 14ದಿನ ಕಳೆದಿವೆಯಾದರೂ ಸರ್ಕಾರ ಮಾತ್ರ ಕುಂಟುನೆಪ ಹೇಳಿಕಾಲಹರಣ ಮಾಡುತ್ತಿದೆ. ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದ ಏಕ ಸದಸ್ಯ ಆಯೋಗ ರಚನೆ ಮಾಡಿದೆ. ಆದರೆ ಸಂಬಂಧಸಿದ ಇಲಾಖೆಗಳು ಮಾಹಿತಿಯೇ ನೀಡುತ್ತಿಲ್ಲ ಎಂದು ಆಯೋಗದ ಅಧ್ಯಕ್ಷರೇ ಹೇಳಿ ದ್ದಾರೆ. ಸರ್ಕಾರ ಮಾಹಿತಿ ಒದಗಿಸಲು ಬದ್ಧತೆ ಪ್ರದ ರ್ಶಿಸುತ್ತಿಲ್ಲ.ಆಯೋಗದ ಅವಧಿಯೂ ಪೂರ್ಣ ಗೊಂಡಿದೆ.
ಮಾಹಿತಿಯೂ ಅಪೂರ್ಣವಾಗಿದೆ. ಸರ್ಕಾರ ಮಾತ್ರ ಸಮೂದಾಯವನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಲೇ ಇದೆ. ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ಒಂದು ಕಡೆ ಮೀಸಲಾತಿ ಜಾರಿಗೊಳಿಸುವದಾಗಿಹೇಳಿಸಮೂದಾಯ ಶಾಸಕರು, ಸಚಿವರೊಂದಿಗೆ ಸಭೆ ನಡೆಸುತ್ತಾರೆ. ಮತ್ತೊಂದು ಕಡೆ ಖಾಲಿಯಿರುವ 37 ಸಾವಿರ ಬ್ಲಾಕ್‌ಲಾಗ್ ಹುದ್ದೆ ಭರ್ತಿ ಮಾಡುವದಾಗಿ ಹೇಳುತ್ತಿದ್ದಾರೆ.
ರಾಜ್ಯ ಮುಖ್ಯಮಂತ್ರಿಗಳು ಒಳ ಮೀಸಲು ಜಾರಿಯಾಗುವವರೆಗೆ ನೇಮಕಾತಿ ನಡೆಸುವದಿಲ್ಲ ಎಂದು ಹೇಳುತ್ತಿದ್ದಾರೆ. ಉದ್ದೇಶ ಪೂರಿತವಾಗಿಯೇ ಆಯೋಗ ವರದಿ ತಡೆಯಲಾಗುತ್ತಿದೆ. ಸರ್ಕಾರ ನೀತಿ ಖಂಡಿ ಹೋರಾಟ ನಡೆಯಲಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಾದಿಗ ಸಮೂದಾಯ ಕಾರ್ಯಕರ್ತರು, ಮುಖಂಡುರಗಳು ಭಾಗವಹಿಸಲಿದ್ದಾರೆ ಎಂದರು. ಮತ್ತೋರ್ವ ಮುಖಂಡ ಶಿವರಾಯ ಅಕ್ಕರಕಿ ಮಾತನಾಡಿ,
ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಸುಪ್ರಿಂಕೊರ್ಟ ಆದೇಶವನ್ನು ಸಹ ಪಾಲಿಸದೇ ಸುಳ್ಳು ಭರವಸೆ ನೀಡುತ್ತಿದೆ. ಒಳ ಮೀಸಲು ಜಾರಿ ಮಾಡಿ ಇಲ್ಲ ಖುರ್ಚಿ ಬಿಡಿ ಹೋರಾಟ ನಡೆಸಲಾಗುತ್ತದೆ. ಸರ್ಕಾರ ಸ್ಪಂದಿಸದೇ ಹೋದಲ್ಲಿ ಮುಂಬರುವ ಜಿಲ್ಲಾ ಮತ್ತು ತಾಲೂಕ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ವಿರುದ್ದ ಹೋರಾಟ ನಡೆಸಲಾಗುತ್ತದೆ ಎಂದರು.
ಈ ಸಂದರ್ಬದಲ್ಲಿ ಡಿಎಸ್ ಎಸ್ ವಿಭಾಗೀಯ ಉಪಾಧ್ಯ ರಂಗಪ್ಪ ಕೋತಿಗುಡ್ಡ, ಅರ್ಜುನ ಕೊಪ್ಪರ, ರಮೇಶ ಸೂಗೂರಾಳ, ಮೌನೇಶ, ಚಂದ್ರಶೇಖರ ಇನ್ನಿತರರಿದ್ದರು