ರಾಜ್ಯಮಟ್ಟದ ಬೃಹತ್​ ರೈತ ಜಾಗೃತಿ ಸಮಾವೇಶ

Massive state-level farmer awareness conference
ಸಂಗಮೇಶ ಸಗರ, ಜಿಲ್ಲಾಧ್ಯಕ್ಷ, ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ
Published on

ವಿಜಯಪುರ: ಕರ್ನಾಟಕ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ವತಿಯಿಂದ ಮೇ 7 ರಿಂದ 9 ರವರೆಗೆ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ರಾಜ್ಯಮಟ್ಟದ ಬೃಹತ್​ ರೈತ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ತಿಳಿಸಿದ್ದಾರೆ.

ಮೇ 7 ರಂದು ಬೆಳಗ್ಗೆ ಇಲ್ಲಿನ ಸಿದ್ಧೇಶ್ವರ ದೇವಸ್ಥಾನದಿಂದ ವಿವಿಧ ಕಲಾ ತಂಡಗಳೊಂದಿಗೆ ಬೃಹತ್​ ರೈತ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆ ಗಾಂಧಿ ವೃತ್ತದ ಮೂಲಕ ಸಾಗಿ ಕಂದಗಲ್ಲ ಹನುಮಂತರಾಯ ರಂಗಮಂದಿರ ಸೇರಲಿದೆ. ನಂತರ ಅಲ್ಲಿ ಹಮ್ಮಿಕೊಂಡಿರುವ ಕೃಷಿ ಮೇಳ ಉದ್ಘಾಟಿಸುವ ಮೂಲಕ ಸಮಾವೇಶಕ್ಕೆ ಚಾಲನೆ ದೊರೆಯಲಿದೆ.

ಮೂರು ದಿನ ನಡೆಯುವ ಸಮಾವೇಶದಲ್ಲಿ ಕೃಷಿಮೇಳ, ಕೃಷಿ ವಿಜ್ಞಾನಿಗಳು ಹಾಗೂ ಪ್ರಗತಿಪರ ರೈತರಿಂದ ಚಿಂತನಾ ಗೋಷ್ಠಿ ಮತ್ತು ಸಾಂಸತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಇನ್ನು ಸಮಾವೇಶಕ್ಕೆ ಹೊರಗಡೆಯಿಂದ ಆಗಮಿಸುವ ರೈತರಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ ಮತ್ತು ವಸತಿಯ ವ್ಯವಸ್ಥೆ ಕಲ್ಪಿಸಲಾಗಿದೆ. ನಾಡಿನ ಹೆಸರಾಂತ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಲಿದ್ದಾರೆ.

ಸಮಾವೇಶದಲ್ಲಿ ನಿತ್ಯವೂ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ, ಅರಣ್ಯ, ವಿದ್ಯುತ್​, ವಿಮೂಲ್​ (ನಂದಿನಿ) ಸೇರಿದಂತೆ ರೈತರಿಗೆ ಸಂಬಂಧಿಸಿದ ಇಲಾಖೆಗಳ ವಿಜ್ಞಾನಿಗಳಿಂದ ಗೋಷ್ಠಿಗಳು ನಡೆಯಲಿವೆ. ಅಲ್ಲದೆ, 100 ಕ್ಕೂ ಅಧಿಕ ಕೃಷಿ ಮಳಿಗೆ ಹಾಕಲಾಗಿದೆ. ಸಮಾವೇಶದಲ್ಲಿ ಪ್ರತಿದಿನ ಸಂಜೆ ರೈತ ಕವನ ಗೋಷ್ಠಿ, ರೈತ ಚಿತ್ರಕಲಾ ಸ್ಪರ್ಧೆ, ರೈತ ರಂಗೋಲಿ ಸ್ಪರ್ಧೆ ಹಾಗೂ ಹಂತಿ ಪದ ಸೇರಿ ಹಲವು ಸಾಂಸತಿಕ ಕಾರ್ಯಕ್ರಮಗಳು ಜರುಗಲಿವೆ.

ಸಮಾವೇಶದ ಕೊನೆಯ ದಿನ ಮೇ 9 ರಂದು ಬೆಂಗಳೂರಿನ ಕಲಾ ತಂಡದಿಂದ ರೈತ ರತ್ನ ಪ್ರೊ. ಎಂ.ಡಿ. ನಂಜುಡಸ್ವಾಮಿ ಅವರ ಜೀವನಾಧಾರಿತ ಡೈರೆಕ್ಟ್​ ಆ್ಯಕ್ಷನ್​ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಸಮಾವೇಶ ಯಶಸ್ವಿಗೊಳಿಸುವಂತೆ ರೈತ ಸಂದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿವರ್ಷ ರಾಜ್ಯಮಟ್ಟದ ಬೃಹತ್​ ರೈತ ಜಾಗೃತಿ ಸಮಾವೇಶ ಆಯೋಜಿಸಲಾಗುತ್ತಿದೆ. ಸಮಾವೇಶದಲ್ಲಿ ರೈತರ ಏಳಿಗೆಗಾಗಿ ಮತ್ತು ಪರಿಸರ ಉಳಿವಿಗಾಗಿ ಸೇವೆ ಸಲ್ಲಿಸಿದ 25 ಜನ ಸಾಧಕರಿಗೆ ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ, ರೈತರ ಏಳಿಗೆಗಾಗಿ ಹೋರಾಟ ಮಾಡಿದ ರೈತರಿಗೆ ಬರಗಾಲ ಭೀಮಶಿ ಅವರ ಸ್ಮರಣಾರ್ಥ ರಾಜ್ಯಮಟ್ಟದ ರೈತ ನಾಯಕ ಪ್ರಶಸ್ತಿ ಹಾಗೂ ಕೃಷಿಯಲ್ಲಿ ವಿನೂತನ ಸಾಧನೆಗೈದ 25 ರೈತರಿಗೆ ನೇಗಿಲಯೋಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net