

ಬಾಳೆಹೊನ್ನೂರು: ಮಲೆನಾಡಿನ ರೈತರ ಜೀವನಕ್ಕೆ ಕಂಟಕವಾಗಿರುವ ಯೋಜನೆ ವಿರುದ್ಧ ಶೃಂಗೇರಿ ಕ್ಷೇತ್ರದ ರೈತರು, ನಾಗರಿಕರು, ರಾಜಕೀಯ ಪಕ್ಷಗಳು, ಸಂಘ, ಸಂಸ್ಥೆಗಳ ಸಹಕಾರದ ಜತೆಗೆ ಶೃಂಗೇರಿ ಕ್ಷೇತ್ರ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯಿಂದ ಆ.17ರಂದು ಕೊಪ್ಪದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ತಿಳಿಸಿದರು.
ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಆಯೋಜಿಸಿದ್ದ ಖಾಂಡ್ಯ, ಬಾಳೆಹೊನ್ನೂರು ಭಾಗದ ರೈತರು, ನಾಗರಿಕರ ಸಭೆಯಲ್ಲಿ ಮಾತನಾಡಿದರು.
ರಾಜ್ಯ ಅರಣ್ಯ, ಪರಿಸರ ಮತ್ತು ಜೀವಶಾಸ ಇಲಾಖೆ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆಗೆ ಬರೆದಿರುವ ಪತ್ರದಲ್ಲಿ 2015ರ ಈಚೆಗೆ ಒತ್ತುವರಿ ಜಮೀನು, ಅನಧಿಕೃತ ರೆಸಾರ್ಟ್, ಬಡಾವಣೆ, ಹೋಂಸ್ಟೇ ವಶಪಡಿಸಿಕೊಂಡು ತಿಂಗಳ ಒಳಗೆ ವರದಿ ನೀಡುವಂತೆ ಆದೇಶಿಸಿದ್ದಾರೆ. ಶಿರೂರು ಹಾಗೂ ವಯನಾಡು ದುರಂತದ ತರುವಾಯ ಪಶ್ಚಿಮಘಟ್ಟ ಉಳಿಸಲು ಈ ಕ್ರಮಕೈಗೊಂಡಿದೆ ಎಂದು ಸರ್ಕಾರ ಹೇಳಿದೆ. ಇದರ ಅಂಗವಾಗಿ ಸಾಗುವಳಿ ಭೂಮಿಯನ್ನು ಸರ್ವೇ ಮಾಡಿ ಒತ್ತುವರಿ ಖುಲ್ಲಾ ಮಾಡಲು ಅರಣ್ಯ ಇಲಾಖೆ ಹೊರಟಿರುವುದು ಮಲೆನಾಡಿನ ರೈತರ ಆತಂಕಕ್ಕೆ ಕಾರಣವಾಗಿದೆ. ಮೂರೂ ತಾಲೂಕಿನ ಹೋಬಳಿಗಳಲ್ಲಿ ರೈತರ, ನಾಗರಿಕರ ಸಭೆ ನಡೆಸಲಾಗಿದ್ದು, ಬೃಹತ್ ಪ್ರತಿಭಟನೆ ಮಾಡಿ ಕ್ಷೇತ್ರ ಬಂದ್ ಮಾಡುವಂತೆ ಸಲಹೆಗಳು ಕೇಳಿಬಂದಿವೆ ಎಂದು ತಿಳಿಸಿದರು.
ಸರ್ಕಾರಕ್ಕೆ ರೈತರು ಾರ್ಮ್ ನಂ.50, 53, 57, 94ಸಿ, 94ಸಿಸಿ ಪಾರಂಪರಿಕ ಅರಣ್ಯಹಕ್ಕುಗಳ ಅರ್ಜಿ ಸಲ್ಲಿಸಿದ್ದು, ಅದನ್ನು ಪರಿಶೀಲಿಸಿ ಹಕ್ಕುಪತ್ರ ನೀಡಿಲ್ಲ. ಜತೆಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಿಲ್ಲ. ಸೆಕ್ಷನ್ 4ರ ಮೀಸಲು ಅರಣ್ಯಕ್ಕೆ ಸಂಬಂಸಿದಂತೆ ಾರೆಸ್ಟ್ ಸೆಟಲ್‌ಮೆಂಟ್ ಆಫೀಸರ್ ಅಧ್ಯಯನ ಮಾಡದೆ ಅರ್ಜಿ ಇತ್ಯರ್ಥಪಡಿಸಿಲ್ಲ. ಡೀಮ್ಡ್ ಅರಣ್ಯ ಪ್ರಕರಣ ಬಾಕಿ ಇರುವಂತೆ ರೈತರ ಸಾಗುವಳಿ ಭೂಮಿ ಖುಲ್ಲಾ ಮಾಡಲು ಹೊರಟಿರುವುದು ಸರಿಯಲ್ಲ. ಈ ಸಮಸ್ಯೆಗಳು ಪರಿಹಾರ ಆಗುವತನಕ ಯಥಾಸ್ಥಿತಿ ಕಾಪಾಡಬೇಕು ಎಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಮಲೆನಾಡಿನ ಎಲ್ಲ ರಾಜಕೀಯ ಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಾತೀತ ಹೋರಾಟ ಮಾಡಲು ತೀರ್ಮಾನಿಸಲಾಗಿದೆ. ಸಂಘ ಸಂಸ್ಥೆಗಳು ಸಹಕಾರ ನೀಡಬೇಕು. ಇದು ಮಲೆನಾಡಿನ ಜನಜೀವನದ ಅಸ್ತಿತ್ವದ ಪ್ರಶ್ನೆ. ಹಾಗಾಗಿ ಎಲ್ಲರೂ ಪಕ್ಷಾತೀತವಾಗಿ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಶಾಸಕರು ಈ ಕುರಿತು ಅರಣ್ಯ ಸಚಿವರು ಹಾಗೂ ಅರಣ್ಯಇಲಾಖೆ ಉನ್ನತ ಅಧಿಕಾರಿಗಳು, ಜಿಲ್ಲಾಧಿಕಾರಿಗಳನ್ನು ಮಲೆನಾಡು ಭಾಗಕ್ಕೆ ಕರೆಸಬೇಕು. ರೈತರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಕೂಡ ಜು.31ರಂದು ಪರಿಸರ ಸೂಕ್ಷ್ಮ ವಲಯದ ಕರಡು ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯರು 60 ದಿನಗಳ ಕಾಲವನ್ನು 90 ದಿನಗಳವರೆಗೆ ಕೊಡಿಸಬೇಕು ಹಾಗೂ ಆಕ್ಷೇಪಣೆ ಸಲ್ಲಿಕೆ ಮಾಡಲು ಕನ್ನಡದಲ್ಲಿ ಸರ್ಕಾರಿ ಅಧಿಸೂಚನೆ ಹೊರಡಿಸಬೇಕು. ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಇದರ ಜವಾಬ್ದಾರಿ ಸಂಸದರು ವಹಿಸಬೇಕೆಂದು ಒತ್ತಾಯಿಸಿದರು.
ಮಲೆನಾಡು ರೈತ ಹಿತರಕ್ಷಣಾ ವೇದಿಕೆ ಸದಸ್ಯರು, ಖಾಂಡ್ಯ, ಬಾಳೆಹೊನ್ನೂರು ಭಾಗದ ರೈತರು, ಸಾರ್ವಜನಿಕರು ಭಾಗವಹಿಸಿದ್ದರು.