ಕಾಡು, ನಾಡಿನ ಪ್ರತ್ಯೇಕತೆ ಗೊಂದಲ

sabhe
ಅರಸಮ್ಮಕಾನು ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ವಿರೋಧಿಸಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು
Published on

ವಿಜಯವಾಣಿ ಸುದ್ದಿಜಾಲ ಬೆಳ್ವೆ

ರಾಜ್ಯದಲ್ಲಿ ಕಾಡು ಹಾಗೂ ನಾಡನ್ನು ಪ್ರತ್ಯೇಕವಾಗಿ ವಿಂಗಡಿಸದಿರುವುದು ಕಸ್ತೂರಿರಂಗನ್ ವರದಿಯ ಹಲವು ಗೊಂದಲಗಳ ಸೃಷ್ಟಿಗೆ ಕಾರಣ. ಕೇರಳ ಈ ವಿಷಯದಲ್ಲಿ ಸಮರ್ಪಕ ಮಾಹಿತಿ ನೀಡಿದ ಪರಿಣಾಮ ಕಸ್ತೂರಿರಂಗನ್ ವರದಿ ಜಾರಿಯಿಂದ ಮುಕ್ತಿ ಪಡೆದಿದೆ. ರಾಜ್ಯ ಸರ್ಕಾರ ಈಗಾಗಲೇ ಈ ವರದಿ ತಿರಸ್ಕರಿಸಿದ್ದು, ವರದಿ ಜಾರಿಯಿಂದ ಜನರಿಗೆ ಆಗುವ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಡಾಮಕ್ಕಿ ಶೇಡಿಮನೆ ಗ್ರಾಮ ಹಿತರಕ್ಷಣಾ ಸಮಿತಿ ವತಿಯಿಂದ ಅರಸಮ್ಮಕಾನು ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನಾ ಸಭೆಯಲ್ಲಿ ಗುರುವಾರ ಮಾತನಾಡಿದರು.

ಉಡುಪಿ ಜಿಲ್ಲಾ ರೈತ ಸಂಘ ಅಧ್ಯಕ್ಷ ಕೆ.ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ, ಉಡುಪಿ ಜಿಲ್ಲಾ ರೈತ ಸಂಘ ಪ್ರಧಾನ ಕಾರ್ಯದರ್ಶಿ ಬಿ.ಸತೀಶ್ ಕಿಣಿ ಬೆಳ್ವೆ, ಸದಸ್ಯ ಉದಯಕುಮಾರ್ ಶೆಟ್ಟಿ ಅಡಕೆಕೊಡ್ಲು, ಮಡಾಮಕ್ಕಿ ಗ್ರಾಪಂ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಶೇಡಿಮನೆ, ಅರಸಮ್ಮಕಾನು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಚಂದ್ರಶೇಖರ ಶೆಟ್ಟಿ ಮೂಡಬೈಲು, ಮಡಾಮಕ್ಕಿ ಶೇಡಿಮನೆ ಗ್ರಾಮ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸೀತಾರಾಮ ಪೂಜಾರಿ ಹೊಗೆಹೊಳೆ, ಉಪಾಧ್ಯಕ್ಷ ಸುರೇಶ್ ಹೆಗ್ಡೆ ಶೇಡಿಮನೆ, ಕಾರ್ಯದರ್ಶಿ ರವಿರಾಜ ಮಂಜ ಮಾಂಡಿ, ಜತೆ ಕಾರ್ಯದರ್ಶಿ ಚಂದ್ರ ನಾಯ್ಕ ಮಾಯಾಬಜಾರ್, ಕೋಶಾಧಿಕಾರಿ ಸುಮಂತ್ ಶೆಟ್ಟಿ ಮಡಾಮಕ್ಕಿ, ಸದಸ್ಯರಾದ ಸಂತೋಷ ಪೂಜಾರಿ ಶೇಡಿಮನೆ, ಪ್ರಶಾಂತ ಪೂಜಾರಿ ಹೊಗೆಹೊಳೆ, ಸದಾನಂದ ಪೂಜಾರಿ ಅರಸಮ್ಮಕಾನು, ಪ್ರಶಾಂತ ಹೆಗ್ಡೆ ಕೆಳಅಗಳಿಬೈಲ್, ಸುಧಾಕರ ಶೆಟ್ಟಿ ಅಗಳಿಬೈಲು, ಪ್ರಕಾಶ ಶೆಟ್ಟಿ ಕತಗೊಡ್, ಸುರೇಶ್ ಶೆಟ್ಟಿ ಬೆಪ್ಡೆ, ವಿಜಯ ಶೆಟ್ಟಿ ಮಡಾಮಕ್ಕಿ, ಸುಧಾಕರ ನಾಯ್ಕ ಮಡಾಮಕ್ಕಿ,ದಯಾನಂದ ಪೂಜಾರಿ ಹಂಜ,ಗಣೇಶ್ ಅರಸಮ್ಮಕಾನು,ಗೌರವ ಸಲಹೆಗಾರರಾದ ಬಾಲಕೃಷ್ಣ ಶೆಟ್ಟಿ ಮಡಾಮಕ್ಕಿ, ರವಿಪ್ರಕಾಶ್ ಹೆಗ್ಡೆ ಶೇಡಿಮನೆ, ರಂಜನ್ ಹೆಗ್ಡೆ ಮಡಾಮಕ್ಕಿ, ಅಶೋಕ ಶೆಟ್ಟಿ ಚಂದ್ರಮಕ್ಕಿ, ಸುರೇಶ ಶೆಟ್ಟಿ ದುಗ್ಗನಮಕ್ಕಿ, ಬಿ.ಮದನ್‌ಮೋಹನ್ ಉಳ್ಳೂರ್, ಡಿ.ರಘುರಾಮ ಶೆಟ್ಟಿ ದುಗ್ಗನಮಕ್ಕಿ, ಸುದೀಪ್ ಹೆಗ್ಡೆ ಶೇಡಿಮನೆ, ಶಶಿಧರ ಶೆಟ್ಟಿ ಶಾಂದ್ರಬೆಟ್ಟು,ಪ್ರವೀಣಕುಮಾರ್ ಶೆಟ್ಟಿ ಅರಸಮ್ಮಕಾನು, ಶಿವರಾಮ ಶೆಟ್ಟಿ ಬೆಪ್ಡೆ, ರಾಜು ಕುಲಾಲ ಲಿಂಗನಾಡಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಪ್ರಶಾಂತ ಹೆಗ್ಡೆ ಸ್ವಾಗತಿಸಿದರು.

ಚಂದ್ರಶೇಖರ ಶೆಟ್ಟಿ ಮೂಡಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು. ಸೀತಾರಾಮ ಪೂಜಾರಿ ಹೊಗೆಹೊಳೆ ವಂದಿಸಿದರು.

ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ಜಾರಿಯಾದಲ್ಲಿ ಜನರಿಗೆ ಸಮಸ್ಯೆಯಾಗಲಿದೆ. ಕಾಡು ಹಾಗೂ ನೈಸರ್ಗಿಕ ಸಂಪತ್ತು ಉಳಿಸಿಕೊಂಡಿದ್ದರೆ ಅದು ಇಲ್ಲಿನ ಜನರಿಂದಲೇ. ವರದಿ ಜಾರಿಯಾದಲ್ಲಿ ಜನರ ಜೀವನಕ್ಕೆ ಮಾರಕ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗಲಿದೆ. ಇದು ಕೇವಲ ಜನಪ್ರತಿನಿಧಿಗಳು ನಡೆಸುವ ಹೋರಾಟವಾಗಿರದೇ ಜನರು ಪಕ್ಷಾತೀತವಾಗಿ ಒಗ್ಗಟ್ಟಿನ ಮೂಲಕ ಸಮಸ್ಯೆಯ ಪರಿಹಾರಕ್ಕಾಗಿ ಹೋರಾಟ ನಡೆಸಬೇಕಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನರ ಬೇಡಿಕೆಗಳಿಗೆ ಸ್ಪಂದಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು.-ಕೆ.ಪ್ರತಾಪಚಂದ್ರ ಶೆಟ್ಟಿ ಅಧ್ಯಕ್ಷರು, ಉಡುಪಿ ಜಿಲ್ಲಾ ರೈತ ಸಂಘ https://www.vijayavani.net/kunda-kannada-language-development-forum https://www.vijayavani.net/conversation-with-isro-scientists

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net