ನರೇಗಾ ಅಡಿ ಕೂಲಿ ಕೆಲಸ ನೀಡುತ್ತಿಲ್ಲವೆಂಬ ಆರೋಪ ಕೂಲಿ ಕಾರ್ಮಿಕರಿಂದ ಬೃಹತ್​ ಪ್ರತಿಭಟನೆ

Massive protest by wage workers alleging that they are not being provided with wage work under NREGA
Published on

ಇಳಕಲ್ಲ (ಗ್ರಾ):ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಅನುಷ್ಠಾನ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಟನೆ ವತಿಯಿಂದ ನಗರದಲ್ಲಿ ಕೂಲಿ ಕಾರ್ಮಿಕರು ಗುರುವಾರ ಬೃಹತ್​ ಪ್ರತಿಭಟನೆ ನಡೆಸಿದರು.ಪ್ರತಿಭಟನಾ ಮೆರವಣಿಗೆ ಮೂಲಕ ತಮಟೆ ಭಾರಿಸುತ್ತಾ ಕಂಠಿ ವೃತ್ತದ ವರೆಗೆ ಆಗಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಾ.ಪಂ. ಕಚೇರಿಯಲ್ಲಿ ಮನವಿ ಸಲ್ಲಿಸಿದರು.

ಗ್ರಾಮೀಣ ಕೂಲಿ ಕಾರ್ಮಿಕರ ಸಂಟನೆ ಮಹಾಂತೇಶ ಮಾತನಾಡಿ, ನರೇಗಾ ಕೂಲಿ ಕಾರ್ಮಿಕರ ಕೂಲಿ ಹಣ ಸರಿಯಾಗಿ ನೀಡುತ್ತಿಲ್ಲ. ಪಂಚಾಯಿತಿ ಅಧಿಕಾರಿಗಳು ಕೂಲಿಗಳ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಈ ಕುರಿತು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ. ನರೇಗಾ ಕಾನೂನಿನ ಪ್ರಕಾರ ಸಹಾಯ ಧನ ಇಲ್ಲಿಯವರೆಗೂ ಕೊಟ್ಟಿಲ್ಲ, ನರೇಗಾ ಅಡಿಯಲ್ಲಿ ವಿಕಲಚೇತನರಿಗೆ ಪ್ರತ್ಯೇಕ ಕೆಲಸ ನೀಡಬೇಕು. ತಾಲೂಕು ಪಂಚಾಯಿತಿಗೆ ಅರ್ಜಿ ಕೊಟ್ಟು 6 ತಿಂಗಳಾದರೂ ಕೆಲಸ ಕೊಟ್ಟಿಲ್ಲ.

ಹೀಗಾದರೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವುದು ಹೇಗೆ? ನರೇಗಾದಲ್ಲಿ ಕೆಲಸ ಕೊಡದೇ ಎನ್​ಎಂ ಎಂಎಸ್​ ಆ್ಯಪ್​ನಲ್ಲಿ ಫೋಟೊ ಸರಿ ಇದ್ದರೂ ಕೂಲಿ ಪಾವತಿ ಮಾಡುತ್ತಿಲ್ಲ. ಎನ್​ಎಂಆರ್​ಒ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೂಲಿ ಪಾವತಿ ಮಾಡುವ ಫೋಟೊ ಅದಲು ಬದಲು ಇದ್ದರೂ ಎನ್​ಆರ್​ಇಜಿ ಕಾನೂನು ಉಲ್ಲಂನೆಮಾಡಿ ಕೂಲಿ ಪಾವತಿ ಮಾಡಿರುವ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ಕೂಲಿ ಕಾರ್ಮಿಕರಿಗೆ ನೀರಿನ ವ್ಯವಸ್ಥೆ ಹಾಗೂ ಪ್ರಥಮ ಚಿಕಿತ್ಸೆ ವ್ಯವಸ್ಥೆ ನೀಡಬೇಕು. ಸ್ವಚ್ಛತಾ ಕಾರ್ಮಿಕರಿಗೆ ವಾಹನ ಚಾಲನೆ ಮಾಡಿದ ಕಾರ್ಮಿಕರಿಗೆ ಕೂಲಿ ಪಾವತಿ ಮಾಡಬೇಕು ಮತ್ತು ಪುನ@ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿ ತಾ.ಪಂ. ಸಿಒ ಸೋಮಲಿಂಗಪ್ಪ ಅಂಟರದಾನಿ, ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಐ.ಐ. ಚಿನಿವಾಲರ ಮಾತನಾಡಿ, ಈಗಾಗಲೇ 10 ತಿಂಗಳಲ್ಲಿ 3.99 ಲಕ್ಷ ಮಾನವ ದಿನಗಳನ್ನು ಸೃಜನೆಮಾಡಿ ಕೆಲಸ ಕೊಡಲಾಗಿದೆ. ಉಳಿದಿದ್ದನ್ನು ಹಂತ ಹಂತವಾಗಿ ನೀಡಲಾಗುವುದು. ಸತತವಾಗಿ ಸುರಿದ ಮಳೆಯಿಂದಾಗಿ ಕೆರೆ, ಹಳ್ಳ ಕೊಳ್ಳಗಳು ತುಂಬಿಕೊಂಡಿದ್ದರಿಂದ ನಿಮಗೆ ಕೆಲಸ ನೀಡುವುದಕ್ಕೆ ಪ್ರಕೃತಿ ಅಡ್ಡ ಬಂದಿದ್ದರಿಂದ ಕೆಲವು ಪಂಚಾಯಿತಿ ವತಿಯಿಂದ ನಿಮಗೆ ಕೆಲಸ ಕೊಟ್ಟಿಲ್ಲ. ಶ್ರೀದಲ್ಲಿಯೇ ಕೆಲಸ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಮುಖಂಡರಾದ ಅಮರೇಶ, ವಿಜಯಲಕ್ಷಿ$್ಮ, ರೇಣುಕಾ, ಶಾರದಾ, ಸೌಮ್ಯ ವಟವಟಿ, ಶಿವಕುಮಾರ, ದೇವಮ್ಮ, ನಾಗರತ್ನ ಇದ್ದರು.

ಇಳಕಲ್ಲದ ತಾಲೂಕು ಪಂಚಾಯಿತಿ ಕಚೇರಿ ಎದುರು ಗ್ರಾಮೀಣ ಕೂಲಿ ಕಾರ್ಮಿಕರ ಸಂಟನೆ ಪದಾ-ಧಿಕಾರಿಗಳು ಬೃಹತ್​ ಪ್ರತಿಭಟನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net