ಜಾತಿ ಗಣತಿ ವಿರೋಽಸಿ ವೀರಶೈವ ಸಮಾಜದಿಂದ ಬೃಹತ್ ಪ್ರತಿಭಟನೆ *ಗಣತಿ ಹಿಂಪಡೆಯದಿದ್ದರೆ ರಾಜಿನಾಮೆಗೆ ಸಿದ್ದ

raichur
raichur
Published on

 ರಾಯಚೂರು ಸರ್ಕಾರದ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ, ಸಮಾಜದ ಒಳ ಪಂಗಡಗಳನ್ನು ಚದುರಿಸಿ ಜಾತಿ ಗಣತಿ ಮಾಡಿದ್ದು, ಇದು ಅವೈಜ್ಞಾನಿಕವಾಗಿದೆ, ಕಾಂತರಾಜ ವರದಿಯೇ ಅವೈಜ್ಞಾನಿಕವಾಗಿದೆಂದು ಮಾನ್ವಿ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮಿಗಳು ಹೇಳಿದರು.

ನಗರದ ಹರ್ಷಿತಾ ಗಾರ್ಡನ್ ನಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಹಮ್ಮಿಕೊಂಡ ಅವೈಜ್ಞಾನಿಕ, ಅಸಂವಿಧಾನಿಕ ಜಾತಿ ಗಣತಿ ವಿರೋಽಸಿ ಸಮಸ್ತ ವೀರಶೈವ ಲಿಂಗಾಯತ ಸಮಾಜದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಕಾಂತರಾಜ ವರದಿಯು ದೋಷ ಪೂರಿತವಾಗಿದ್ದು, ಸರಿಪಡಿಸಬೇಕಾಗಿದೆ, ವೀರಶೈವ ಲಿಂಗಾಯತ ಸಮಾಜದ ಒಳ ಪಂಗಡಗಳನ್ನು ಒಡೆಯುವ ಕೆಲಸ ಸರ್ಕಾರ ಮಾಡುತ್ತಿದೆ. ಈ ಹಿಂದೆ ಪಾಠ ಕಲಿಸಲಾಗಿದ್ದರೂ ಸರ್ಕಾರಕ್ಕೆ ಬುದ್ದಿ ಬಂದಿಲ್ಲ ಮತ್ತೆ ಪಾಠ ಕಲಿಸುವ ಕೆಲಸ ಮಾಡಬೇಕಾಗುತ್ತದೆ.

ವೀರಶೈವ ಸಮಾಜದಲ್ಲಿ ಶೇ ೨೭ ರಷ್ಟಿದ್ದ ಜನಸಂಖ್ಯೆಯನ್ನು ಕೇವಲ ೬೦ ಲಕ್ಷಕ್ಕೆ ಇಳಿಸಲಾಗಿದೆ, ಸರ್ಕಾರದ ಸಾಮಾಜಿಕ, ಆರ್ಥಿಕ, ಮತ್ತು ಶೈಕ್ಷಣಿಕವಾಗಿ ತುಳಿಯುವ ಕೆಲಸ ಮಾಡಬಾರದು, ಸಮಾಜದ ಒಳ ಪಂಗಡಗಳು ಚದುರಿ ಹೋಗದಂತೆ ನಮ್ಮ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ, ಗ್ರಾಮೀಣ ಭಾಗದಲ್ಲಿ ಸಮಾಜದ ಮಠಾಽÃಶರು ಲಿಂಗಪೂಜೆ ಮಾಡುವ ಮೂಲಕ ಜನ ಜಾಗೃತಿ ಮೂಡಬೇಕಾಗಿದೆ, ಲಿಂಗ ದೀಕ್ಷೆ ಮೂಲಕ ಸಮಾಜದ ಒಗ್ಗಟ್ಟು ಪ್ರದರ್ಶಿಸಿಬೇಕು ಎಂದು ತಿಳಿಸಿದರು.

ವೀರಶೈವ ಸಮಾಜ ಜಿಲ್ಲಾಧ್ಯಕ್ಷ ಶರಣ ಬೂಪಾಲ ನಾಡಗೌಡ ಮಾತನಾಡಿ, ವೀರಶೈವ ಲಿಂಗಾಯತ ಸಮಾಜವವು ಶೇ.೨೭ ರಷ್ಟಿದೆ, ಆದರೆ ಸರ್ಕಾರದ ಜಾತಿ ಗಣತಿಯಲ್ಲಿ ಶೇ.೧೧ ರಷ್ಟಿದೆ ಎಂದು ಬಿಂಬಿಸಲಾಗಿದೆ, ವೀರಶೈವ ಲಿಂಗಾಯ ಸಮಾಜದ ಜನಸಂಖ್ಯೆ ೨ ಕೋಟಿಗೂ ಅಽಕ ಇದೆ, ಆದರೆ ಸರ್ಕಾರ ಒಳ ಪಂಗಡಗಳನ್ನು ಹಂಚಿ ಕೇಲವ ೬೦ ಲಕ್ಷಕ್ಕೆ

ತೋರಿಸಿದ್ದಾರೆ ಎಂದರು.ಒಳ ಪಂಗಡಗಳನ್ನು ಹಂಚಿ ಹೋಗುವುದರಿಂದ ಸಂಖ್ಯೆ ಕಡಿಮೆಯಾಗಿ ರಾಜಕೀಯ ಶಕ್ತಿ ಕುಗ್ಗಿಸಲು ಪ್ರಯತ್ನ ನಡೆದಿವೆ, ಇದೇ ಸಮೀಕ್ಷೆ ಅಂಗೀಕಾರವಾದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಮಾರಕವಾಗಲಿದೆ,ವೀರಶೈವ ಲಿಂಗಾಯತ ಒಂದೇ ಎಂದು ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ ಎಂದರು.

ನಗರ ಶಾಸಕ ಡಾ.ಶಿವರಾಜ ಪಾಟೀಲï ಮಾತನಾಡಿ, ಜÁತಿಗಣತಿ ಕೈ ಬಿಡದಿದ್ದರೆ ರಕ್ತಕ್ರಾಂತಿ ನಡೆಸಲು ಹಿಂಜರಿಯುವುದಿಲ್ಲ. ಇದು ವೀರಶೈವ ಲಿಂಗಾಯತ ಸಮಾಜ ಒಡೆಯುವ ಕೃತ್ಯವಾಗಿದೆ. ಸರ್ಕಾರದ ಗಣತಿ ಕೈಬಿಡದಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವೆ. ಸಮುದಾಯಕ್ಕಿಂತ ಅಽಕಾರ ದೊಡ್ಡದಲ್ಲ ಎಂದರು.

ಎಂಎಲï ಸಿ ಬಸನಗೌಡ ಬಾದರ್ಲಿ ಮಾತನಾಡಿ, ಸಮಾಜದಿಂದ ನಾವು ವಿನಃ ನಮ್ಮಿಂದ ಸಮಾಜವಲ್ಲ. ಈಗಾಗಲೇ ಸರ್ಕಾರಕ್ಕೆ ಪರಿಸ್ಥಿತಿ ಮನವರಿಕೆ ಮಾಡಿಕೊಡಲಾಗಿದೆ. ಸಮಯ ಬಂದರೆ ನಾವು ರಾಜೀನಾಮೆ ಕೊಡಲು ಸಿದ್ಧ ಎಂದು ಎಚ್ಚರಿಸಿದರು.

ನಂತರ ಸಾವಿರಾರು ಸಂಖ್ಯೆಯಲ್ಲಿ ನಗರದ ಬೆಪಾಸ್ ರಸ್ತೆಯ ಜಗದ್ಗುರು ರೇಣುಕಾಚಾರ್ಯ ವೃತ್ತದಿಂದ ಡಿಸಿ ಕಚೇರಿವರೆಗೂ ಪಾದಯಾತ್ರೆ ಮೂಲಕ ತೆರಳಿ ಜಿ¯್ಲÁಡಳಿತಕ್ಕೆ ಮನವಿ ಸಲ್ಲಿಸಿದರು. ಇದರಿಂದ ಟ್ರಾಫಿಕï ಜÁಮï ಉಂಟಾಗಿ ಪ್ರಯಾಣಿಕರು ಕೆಲ ಕಾಲ ಪರದಾಡುವಂತಾಯಿತು.

ಈ ಸಂದರ್ಭದಲ್ಲಿ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಶಾಂತಮಲ್ಲಾ ಶಿವಾಚಾರ್ಯ ಮಹಾಸ್ವಾಮಿಗಳು, ಅಭಿನವ ರಾಚೋಟಿವೀರ ಶಿವಾಚಾರ್ಯ ಮಹಾಸ್ವಾಮಿಗಳು, ಪಂಚಾಚಾರ್ಯ ಶಿವಮೂರ್ತಿ ಸ್ವಾಮಿಗಳು, ಗುರುಮೂರ್ತಿ ಶಿವಾಚಾರ್ಯ ಮಹಾಸ್ವಾ ಮಿಗಳು, ಕಡೆಚೂರು ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಯದ್ದಲದೊಡ್ಡಿ ಮಹಾಲಿಂಗ ಸ್ವಾಮಿಗಳು, ವಿರುಪಾಕ್ಷಿ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಮಾನ್ವಿ ಶಂಭು ಲಿಂಗ ಮಹಾಸ್ವಾಮಿಗಳು, ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು,

ಬೂದಿ ಬಸವೇಶ್ವರ ಮಹಾ ಸ್ವಾಮಿಗಳು, ಶಂಭು ಸೋಮನಾಥ ಮಹಾ ಸ್ವಾಮಿಗಳು,ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪೂರ,ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಬಸವರಾಜ ಪಾಟೀಲ್ ಇಟಗಿ, ಬಸನಗೌಡ ಬ್ಯಾಗವಾಟ್, ಶರಣಬಸವ ಜೋಳದಡಿಗಿ, ಬಸವ ಕೇಂದ್ರ ರಾಚನಗೌಡ ಕೋಳೂರು, ಕೆ.ಎಂ ಪಾಟೀಲ್, ವೀರನಗೌಡ, ರಾಚನಗೌಡ, ಹರವಿ ನಾಗನಗೌಡ, ಶಿವಶರಣರೆಡ್ಡಿ ಸೇರಿದಂತೆ ಸಮಾಜದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net