ಹಿಂದು ಸಂಘಟನೆಗಳ ಬೃಹತ್ ಪ್ರತಿಭಟನೆ

Massive protest by Hindu organisations
ಪಾಕ್‌ಧ್ವಜದ ಧ್ವಜದ ರೀಲ್ಸ್ ಪ್ರಕರಣವನ್ನು ಖಂಡಿಸಿ ಕಲಾದಗಿಯಲ್ಲಿ ಹಿಂದು ಪರ ಸಂಘಟನೆಗಳಿಂದ ಬಹತ್ ಪ್ರತಿಭಟನೆ ನಡೆಯಿತು.
Published on

ಕಲಾದಗಿ: ಗ್ರಾಮದ ತೌಸ್ಿ ಮೆಹತರ ಎಂಬ ಯುವಕ ತನ್ನ ಮೊಬೈಲ್‌ನ ಸ್ಟೇಟಸ್‌ನಲ್ಲಿ ಪಾಕ್ ಧ್ವಜದ ರೀಲ್ಸ್ ಅನ್ನು ಇಟ್ಟಿದ್ದ ಪ್ರಕರಣವನ್ನು ಖಂಡಿಸಿ, ಆರೋಪಿ ತೌಸ್ೀನನ್ನು ಹಾಗೂ ಇಂಥಹವರನ್ನು ಬೆಂಬಲಿಸುವವರನ್ನು ಗಡಿಪಾರು ಮಾಡಲು ಆಗ್ರಹಿಸಿ ಗ್ರಾಮದಲ್ಲಿ ಹಿಂದು ಪರ ಸಂಘಟನೆಗಳ ವತಿಯಿಂದ ಬಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ಆಯೋಜಿಸಲಾಗಿತ್ತು.

ಬೆಳಗ್ಗೆ ಗ್ರಾಮದ ಬಯಲು ರಂಗಮಂದಿರ ಬಳಿ ಸೇರಿದ ಗ್ರಾಮ ಸೇರಿದಂತೆ ಆಸುಪಾಸಿನ ಊರುಗಳ ದೇಶಭಕ್ತರ ಬಳಗದ ಹಾಗೂ ಹಿಂದು ಪರ ಸಂಘಟನೆಗಳ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆ ಅಂಬೇಡ್ಕರ್ ವತ್ತ, ಹೆಣ್ಣುಮಕ್ಕಳ ಶಾಲೆ, ಹೊಸೂರ ಚೌಕ, ಕೊಬ್ರಿ ಸರ್ಕಲ್, ಗ್ರಾಪಂ, ಮಾರುಕಟ್ಟೆ, ಬಸವೇಶ್ವರ ವತ್ತ ಮೂಲಕ ಹಾಯ್ದು ನಾಡ ಕಚೇರಿ ಬಳಿ ಸಭೆಯಾಗಿ ಮಾರ್ಪಾಡಾಯಿತು.

ಮೆರವಣಿಗೆಯುದ್ಧಕ್ಕೂ ಪ್ರತಿಭಟನಾಕಾರರು ಆರೋಪಿ ತೌಸ್ೀ ಹಾಗೂ ಆತನನ್ನು ಬೆಂಬಲಿಸುವವರ ವಿರುದ್ದ ಘೋಷಣೆಗಳನ್ನು ಕೂಗಿದರು. ಇಂಥಹವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು. ಪ್ರಮುಖ ವತ್ತಗಳಲ್ಲಿ ಆರೋಪಿ ತೌಸ್ೀನ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ನಾಡಕಚೇರಿ ಬಳಿ ಹಿಂದು ಮುಖಂಡ ಶಂಕರಗೌಡ ಪಾಟೀಲ ಮಾತನಾಡಿದರು. ನಂತರ ಉಪತಹಶೀಲ್ದಾರ ಆರ್.ಆರ್. ಕುಲಕರ್ಣಿ ಅವರಿಗೆ ಜಿಲ್ಲಾಧಿಕಾರಿಗಳಿಗೆ ಬರೆದಿದ್ದ ಮನವಿ ಸಲ್ಲಿಸಲಾಯಿತು.

ಮುಖಂಡರಾದ ಬಶೆಟ್ಟೆಪ್ಪ ಅಂಗಡಿ, ಶ್ರೀಧರ ವಾಘ, ಲಕ್ಷ್ಮಣ ಶಿರಬೂರ, ರಾಜೂ ಪೂಜಾರಿ, ನಿಂಗಪ್ಪ ಅಗಸರ, ಹನುಮಂತ ತಳವಾರ, ತುಳಸಪ್ಪ ತಳವಾರ, ಯಮುನಪ್ಪ ಬೂದಿಹಾಳ, ನೂರಾರು ಜನ ಮುಖಂಡರು,ಯುವಕರು ಪ್ರತಿಭಟನೆಯಲ್ಲಿದ್ದರು.

ಡಿವೈಎಸ್‌ಪಿ ಪಂಪನಗೌಡ ಮಾರ್ಗದರ್ಶನದಲ್ಲಿ ಪಿಎಸ್‌ಐ ಚಂದ್ರಶೇಖರ ಹೆರಕಲ, ನೂರಜಾನ ಸಾಬರ ಮತ್ತವರ ತಂಡ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸಿದ್ದರು.

ದೇಶದ್ರೋಹಿಗಳ ವಿರುದ್ಧ ಸಂಘಟಿತರಾಗಿ..!

ನಾಡಕಚೇರಿಯ ಮುಂದೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮುಧೋಳದ ಹಿಂದು ಪರ ಸಂಘಟನೆ ಮುಖಂಡ ಶಂಕರಗೌಡ ಪಾಟೀಲ ‘ಹಿಂದುಗಳ ಮೇಲೆ, ದೇಶ, ಧರ್ಮದ ಮೇಲೆ ಇಲ್ಲಷ್ಟೆ ಅಲ್ಲಾ ಎಲ್ಲಾ ಕಡೆ ದೇಶದ್ರೋಹಿಗಳಿಂದ ದೌರ್ಜನ್ಯ ನಡೆಯುತ್ತಿದೆ. ಇಂಥವರನ್ನು ಮೆಟ್ಟಿ ನಿಲ್ಲಬೇಕೆಂದರೆ ನಮ್ಮ ಸಮಾಜಕ್ಕೆ ನಾವೇ ಸೈನಿಕರಾಗಿ ನಿಲ್ಲಬೇಕು. ನೀನು ಯಾರು? ಎಂದಾಗ ನಾವೆಲ್ಲಾ ಜಾತಿಯನ್ನು ಹೇಳಿದ್ದರ ಪರಿಣಾಮ ಇಂಥಹ ದೇಶದೋಹಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಆದ್ದರಿಂದ ನಾವೆಲ್ಲಾ ಸಂಘಟಿತರಾಗಬೇಕು. ಜಾಗತರಾಗಬೇಕು ಎಂದು ಕರೆ ನೀಡಿದರು. ನಿನ್ನೆಯ ಸ್ಟೇಟಸ್ ದುರ್ಘಟನೆಯ ಹಿಂದೆ ಯಾರಿದ್ದಾರೆ? ಆತನಿಗೆ ಈ ವಿಡಿಯೋ ಯಾರು ಕಳಿಸಿದರು? ಎಲ್ಲಿಂದ ಬಂತು? ಎಂಬುದೆಲ್ಲಾ ತನಿಖೆಯಾಗಿ ಅವರನ್ನು ಬಂಧಿಸಬೇಕು. ಆಗ ಮಾತ್ರ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ. ಇಂಥಹವರಿಗೆ ಶಿಕ್ಷೆ ಆಗಲು ಸಾಧ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net