ಆನೇಕಲ್​ನಲ್ಲಿ ರೈತರಿಂದ ಬೃಹತ್​ ಪ್ರತಿಭಟನೆ

20 08 2025_BGR_RURAL-PAGE_03 NEW
ಆನೇಕಲ್​ ತಾಲೂಕಿನ ಮುತ್ತಾನಲ್ಲೂರು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಕೆಐಎಡಿಬಿ ಭೂಸ್ವಾಧಿನ ಕೈಬಿಡುವಂತೆ ಆಗ್ರಹಿಸಿ 'ನಮ್ಮ ಭೂಮಿ ನಮ್ಮ ಹಕ್ಕು' ೂಷಣೆಯೊಂದಿಗೆ ಪಟ್ಟಣದಲ್ಲಿ ಬೃಹತ್​ ಮೆರವಣಿಗೆ ನಡೆಸಿ ರೈತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು.
Published on

ಆನೇಕಲ್​ : ಕೆಐಎಡಿಬಿ ಭೂಸ್ವಾಧಿನ ಕೈಬಿಡುವಂತೆ ಆಗ್ರಹಿಸಿ "ನಮ್ಮ ಭೂಮಿ ನಮ್ಮ ಹಕ್ಕು' ೂಷಣೆಯೊಂದಿಗೆ ಪಟ್ಟಣದಲ್ಲಿ ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಮಂಗಳವಾರ ಆಕ್ರೋಶ ಹೊರಹಾಕಿದರು. ತಾಲೂಕಿನ ಹಂದೇನಹಳ್ಳಿ, ಮುತ್ತಾನಲ್ಲೂರು ಮತ್ತು ಯಮರೆ ಪಂಚಾಯಿತಿಯ ವ್ಯಾಪ್ತಿಯ 2500 ಎಕರೆ ಕೃಷಿ ಭೂಮಿಯನ್ನು ಅವೈಜ್ಞಾನಿಕವಾಗಿ ಕೆಐಎಡಿಬಿ ಭೂಸ್ವಾಧಿನ ಪಡಿಸಿಕೊಳ್ಳುತ್ತಿರುವುದನ್ನು ಖಂಡಿಸಿ ಆನೇಕಲ್​ ಭಾಗದ ರೈತರು ಹಂತ ಹಂತವಾಗಿ ಪ್ರತಿಭಟನೆ ನಡೆಸುತ್ತಿದ್ದು, ಮುತ್ತಾನಲ್ಲೂರು ಗ್ರಾಮದಲ್ಲಿ ಆಹೋರಾತ್ರಿ ಪ್ರತಿಭಟನೆ 41 ದಿನ ಪೂರೈಸಿದರೂ ಸರ್ಕಾರ ಸ್ಪಂದಿಸದ ಕಾರಣ ಆಕ್ರೋಶಗೊಂಡ ರೈತರು ದಲಿತ, ಕನ್ನಡ ಪರ ಸಂಟನೆಗಳು, ವಕೀಲರ ಸಂ ಸೇರಿ ಹಲವು ಸಂಟನೆ ಬೆಂಬಲದೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದರು.

ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್​ ಕಚೇರಿ ಬಳಿ ಬಂದಾಗ ಪೊಲೀಸರು ಗೇಟ್​ನಲ್ಲೇ ತಡೆಯಲು ಯತ್ನಿಸಿದರಾದರೂ ಪ್ರತಿಭಟನಕಾರರನ್ನು ತಡೆಯಲು ವಿಫಲವಾದರು. ಗೇಟ್​ ತಳ್ಳಿ ತಹಸೀಲ್ದಾರ್​ ಕಚೇರಿ ಒಳಗೆ ನುಗ್ಗಲು ಯತ್ನಿಸಿದರು. ಕಚೇರಿಗೆ ಬೀಗ ಹಾಕಿದ್ದರಿಂದ ಒಳ ಹೋಗುವ ಪ್ರಯತ್ನ ಫಲ ನೀಡಲಿಲ್ಲ. ಆಗ ಬಾಗಿಲು ಮುಂದೆಯೇ ಕುಳಿತು ಪ್ರತಿಭಟಿಸಿದರು. ರಾಜ್ಯ ಸರ್ಕಾರ ಹಾಗೂ ಕೆಐಎಡಿಬಿ ಅಧಿಕಾರಿಗಳು ರೈತರ ಬದುಕನ್ನೇ ಸರ್ವನಾಶ ಮಾಡಲು ಹೊರಟ್ಟಿದ್ದಾರೆ. ಇದು ರೈತರು ಅಳಿವು, ಉಳಿವಿನ ಪ್ರಶ್ನೆಯಾಗಿದ್ದು, ಪ್ರಾಣ ಒತ್ತೆಯಿಟ್ಟಾದರೂ ನಮ್ಮ ಭೂಮಿ ರಸಿಕೊಳ್ಳುತ್ತೇವೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಭೂ ಸ್ವಾಧಿನ ವಿರೋಧಿ ಹೋರಾಟದ ಸಮಿತಿ ವಿಶ್ವನಾಥ ರೆಡ್ಡಿ, ಕೇಶವ, ಚಂದ್ರರೆಡಿ, ರಾಮಸ್ವಾಮಿ ರೆಡ್ಡಿ, ಜಯಪ್ರಕಾಶ್​, ಯಂಗಾರೆಡ್ಡಿ, ಯುವ ಮುಖಂಡ ಕೆ ಪಿ ರಾಜು , ಸಿಪಿಎಂ ಮಂಜುನಾಥ್​, ಬಾಲಣ್ಣ, ಸುರೇಶ್​, ಮಾಹದೇಶ್​, ರಾವಣ ಪಟಾಪಟ್​ ಪ್ರಕಾಶ್​, ಕನ್ನಡ ಪರ ಹೋರಾಟಗಾರ ಲೋಕೇಶ್​ಗೌಡ, ಹುಲ್ಲಹಳ್ಳಿ ಶ್ರೀನಿವಾಸ್​, ದೇವರಾಜು ರೆಡ್ಡಿ, ಎಸ್​ವಿಟಿ ಮಂಜುನಾಥ್​, ಹಾಲ್ದೇನಹಳ್ಳಿ ಮಾಜಿ ಅಧ್ಯಕ್ಷ ರಾಮಪ್ಪ, ಪ್ರಭಾ ಬೆಳವಂಗಲ ಮತ್ತಿತರರಿದ್ದರು.

ಹೋರಾಟಕ್ಕೆ ಮಾಜಿ ಕೇಂದ್ರ ಸಚಿವ ಸಾಥ್​ : ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಪ್ರತಿಭಟನೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಸಾತ್​ ನೀಡಿದರು. ತಾಲೂಕಿನ ರೈತರು 40 ದಿನಗಳಿಂದ ಪತ್ರಿಭಟನೆ, ಜಾಥಾಗಳನ್ನು ನಡೆಸಿ ತಮ್ಮ ಭೂಮಿ ಅವೈಜ್ಞಾನಿಕವಾಗಿ ಕೆಐಎಡಿಬಿ ವಶಪಡಿಸಿ ಕೊಂಡಿರುವುದರ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೂ ಸರ್ಕಾರ ಆನೇಕಲ್​ ಭಾಗದ ರೈತರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ, ಮುಂದೆ ರೈತರ ಶಾಂತಿ ಹೋರಾಟ ಕ್ರಾಂತಿಯೆಡೆಗೆ ಬದಲಾಗಬಹುದು. ಹಾಗಾಗಿ ಈ ಕೂಡಲೆ ಮುಖ್ಯ ಮಂತ್ರಿಗಳು ರೈತರ ಮನವಿ ಪರಿಗಣಿಸಿ ರೈರ ಪರವಾದ ನಿರ್ಧಾರ ತೆಗೆದು ಕೊಳ್ಳ ಬೇಕೆಂದು ಎ.ನಾರಾಯಣಸ್ವಾಮಿ ಆಗ್ರಹಿಸಿದರು.

ತಲೆ ತಲಾಂತರ ಗಳಿಂದ ಕೃಷಿ ನಂಬಿ ಕೊಂಡು ಬಂದಿರುವ ಇಲ್ಲಿನ ರೈತರನ್ನು ರಾಜ್ಯಸರ್ಕಾರ ಬೀದಿಪಾಲು ಮಾಡಲು ಹೊರಟಿದೆ. ಹೀಗಾಗಿ ನಮ್ಮ ಕೃಷಿ ಭೂಮಿಯನ್ನು ನಾವು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. > ವಿಶ್ವನಾಥ ರೆಡ್ಡಿ ಭೂ ಸ್ವಾಧಿನ ವಿರೋಧಿ ಹೋರಾಟ ಸಮಿತಿಯ ಮುತ್ತಾ ನಲ್ಲೂರಲ್ಲಿ 40 ದಿನದಿಂದ ಆಹೋರಾತ್ರಿ ಧರಣಿ ಮುಂದುವರಿಸಿದ್ದೇವೆ. ಇದು ನಾಲ್ಕು ಸಾವಿರ ದಿನಗಳಾದರೂ ನಮ್ಮ ಭೂಮಿಯನ್ನು ನಾವು ಉಳಿಸಿಕೊಳ್ಳಲು ಧರಣಿ ಮುಂದುವರಿಸುತ್ತೇವೆ. ತಾಲೂಕು ಕಚೇರಿ ಮುತ್ತಿಗೆ ಹಾಕಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ತೀವ್ರಗೊಳಿಸಲಾಗುವುದು. > ಕೇಶವ ರೈತ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net