ಲಾಠಿ ಪ್ರಹಾರ ಖಂಡಿಸಿ ಬೃಹತ್ ಪ್ರತಿಭಟನೆ

bdm 12-1 protest
ಬಾದಾಮಿ ನಗರದ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಪ್ರತಿಭಟನಾ ರ‌್ಯಾಲಿ ನಡೆಸಿದರು. ಸಮಾಜದ ಮುಖಂಡರಾದ ಸಿದ್ಧಣ್ಣ ಶಿವನಗುತ್ತಿ, ತಾಲೂಕುಧ್ಯಕ್ಷ ಎಂ.ಎಸ್. ರುದ್ರಗೌಡ್ರ, ಎಂ.ಡಿ. ಯಲಿಗಾರ, ಪ್ರಧಾನ ಕಾರ್ಯದರ್ಶಿ ಅಶೋಕ ಗಂಗಾಲ, ಉಪಾಧ್ಯಕ್ಷ ನಿಂಗಬಸಪ್ಪ ದೂಳಪ್ಪಮವರ, ಮುಖಂಡರಾದ ಎಂ.ಡಿ ಯಲಿಗಾರ ಪಾಲ್ಗೊಂಡಿದ್ದರು.
Published on

ಬಾದಾಮಿ : ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದವರ ಮೇಳೆ ಲಾಠಿ ಪ್ರಹಾರ ಮಾಡಿದ ಪೊಲೀಸ್‌ರ ಕ್ರಮ ವಿರೋಧಿಸಿ ನಗರದಲ್ಲಿ ಪಂಚಮಸಾಲಿ ನಗರ ಘಟಕದಿಂದ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ನಗರದ ಕಿತ್ತೂರ ಚನ್ನಮ್ಮ ವೃತ್ತದಿಂದ ಅಂಬೇಡ್ಕರ್ ವೃತ್ತ ಹಾಗೂ ಪುಲಿಕೇಶಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಯಿತು.

ಸಮಾಜದ ಮುಖಂಡರಾದ ಸಿದ್ದಣ್ಣ ಶಿವನಗುತ್ತಿ, ತಾಲೂಕು ಅಧ್ಯಕ್ಷ ಎಂ.ಎಸ್. ರುದ್ರಗೌಡ್ರ ಮಾತನಾಡಿ, ಪೊಲೀಸರು ಪ್ರತಿಭಟನೆ ನಿಯಂತ್ರಿಸಲು ದುರುದ್ದೇಶದಿಂದ ಲಾಠಿ ಚಾರ್ಜ್ ನೆಪದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಸಮಾಜದ ಮುಖಂಡ ಎಂ.ಡಿ. ಯಲಿಗಾರ, ಪ್ರಧಾನ ಕಾರ್ಯದರ್ಶಿ ಅಶೋಕ ಗಂಗಾಲ, ಉಪಾಧ್ಯಕ್ಷ ನಿಂಗಬಸಪ್ಪ ದೂಳಪ್ಪನವರ, ಮುಖಂಡರಾದ ಎಂ.ಡಿ. ಯಲಿಗಾರ, ಶರಣಪ್ಪ ಮಾವಿನಮರದ, ಬಸವರಾಜ ಉಳ್ಳಾಗಡ್ಡಿ, ಸಿದ್ದು ಗುಡುಗುಡಿ, ಟಿ.ಎಂ. ಬೂದಿಹಾಳ, ನಿಂಗಪ್ಪ ಹೊಸಮನಿ, ಚಂದ್ರಶೇಖರ ನರಗುಂದ, ಮಳಿಶಾಂತ ಬಿಳೆಬಾಳ, ಸಂಗಪ್ಪ ಚೌದ್ರಿ, ಆರ್.ಬಿ. ಸಂಕದಾಳ, ಬಿ.ಎಸ್. ಪಾಟೀಲ, ಬಸು ಅಮರಗೋಳ, ರಮೇಶ ಯಾದವಾಡ, ಎನ್.ಎಸ್. ಬೊಮ್ಮನಗೌಡ್ರ, ಸಿ.ವೈ. ಎಲಿಗಾರ, ಬಾಪುಗೌಡ ಪಾಟೀಲ, ರಮೇಶ ಉಳ್ಳಾಗಡ್ಡಿ, ಲೆಂಗೆಗೌಡ್ರ, ಬಸು ಹುನಗುಂದ, ಬಸು ಸುಂಕದ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net