ರೈತರಿಂದ ಬೃಹತ್​ ಪಾದಯಾತ್ರೆ

Massive march by farmers
ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಹೊರ್ತಿ ಗ್ರಾಮದ ರೈತರು ಇಂಡಿ ವರೆಗೆ ಪಾದಯಾತ್ರೆ ಕೈಗೊಂಡರು. ಬಿಜೆಪಿ ಮುಖಂಡ ಹಣಮಂತ ರಾಯಗೌಡ ಪಾಟೀಲ, ಶಂಕರ ಸಾಹುಕಾರ ತೇಲಸಂಗ, ಶರಣು ಡಂಗಿ, ಬಸವರಾಜ ಕವಡಿ, ಸಿದ್ದರಾಯ ಬಬಲಾದ, ಹೂವಣ್ಣ ಅಡವಿ ಇತರರಿದ್ದರು.
Published on

ಹೋರ್ತಿ: ಗುತ್ತಿ ಬಸವಣ್ಣ ಏತ ನಿರಾವರಿ ಯೋಜನೆಯ ವಸಂತ ನಗರ ಹಂಜಗಿ ಗ್ರಾಮದಿಂದ ಝಳಕಿ ಗ್ರಾಮದ ವ್ಯಾಪ್ತಿವರೆಗಿನ ಸಬ್​ ಕಾಲುವೆ ಕಾಮಗಾರಿ ಮೂರ್ಣಗೊಂಡು 9 ವರ್ಷಗಳಾದರೂ ನೀರು ಹರಿಸದಿರುವ ಕ್ರಮ ಖಂಡಿಸಿ ರೈತರು ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಹಣಮಂತ ರಾಯಗೌಡ ಪಾಟೀಲ ಎಂದು ಹೇಳಿದರು.

ಅಂಜುಟಗಿ ಗ್ರಾಮದಲ್ಲಿ ಮಂಗಳವಾರ ಜೈಅಂಬಾ ಭವಾನಿ ದೇವಸ್ಥಾನದಿಂದ ಇಂಡಿ ಮಿನಿ ವಿಧಾನಸೌಧದ ವರಗೆ ರೈತರ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗ ಜನ, ಜಾನುವಾರುಗಳು ನೀರಿಲ್ಲದೆ ಕಷ್ಟ ಅನುಭವಿಸುವಂತಾಗಿದೆ. ಕೆಬಿಜಿಎನ್​ಎಲ್​ ಅಧಿಕಾರಿಗಳು ಹಾಗೂ ಶಾಸಕರಿಗೆ ಅನೇಕ ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಮುಖಂಡರಾದ ಶಂಕರ ಸಾಹುಕಾರ ತೇಲಸಂಗ, ಶರಣು ಡಂಗಿ, ಬಸವರಾಜ ಕವಡಿ, ಸಿದ್ದರಾಯ ಬಬಲಾದ, ಹೂವಣ್ಣ ಅಡವಿ, ಮಾಳಪ್ಪ ಹೂಗಾರ, ಶ್ರೀಶೈಲ ಪೂಜಾರಿ, ಶಂಕರೇಪ್ಪ ಆಸಂಗಿ, ಅಂಬಣ್ಣ ಭತಗುಣಕಿ ಹಾಗೂ ರೈತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net