ಬಳ್ಳಾರಿ ; ರಾಜಯೋಗಿನಿ ದಾದಿ ಪ್ರಕಾಶಮಣಿಜೀ ಅವರ ಪವಿತ್ರ ಸ್ಮರಣಾರ್ಥ ವಿಶ್ವ ಭ್ರಾತೃತ್ವ ದಿನದ ಅಂಗವಾಗಿ ನಗರದ ಬಹ್ಮಕುಮಾರಿಸ್ ಶಿವಧ್ಯಾನ ಜ್ಞಾನಮಂದಿರದಲ್ಲಿ ಆ. 25 ರಂದು ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿ ಸಂಚಾಲಕಿ ಬಿ.ಕೆ.ನಿರ್ಮಲಾ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿ ಸಮಾಜ ಸೇವಾ ವಿಭಾಗ ಹಾಗೂ ಭಾರತ ರೆಡ್ ಕ್ರಾಸ್ ಸೊಸೈಟಿ ಸಹಯೋಗದೊಂದಿಗೆ ನಡೆಯಲಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ದೆಹಲಿಯಲ್ಲಿ ಬೃಹತ್ ರಕ್ತದಾನ ಅಭಿಯಾನ ಉದ್ಘಾಟಿಸಿದ್ದಾರೆ. ಆ.22 ರಿಂದ 25ರವರೆಗೆ ನೂರು ಗಂಟೆಗಳಲ್ಲಿ ಭಾರತ ಮತ್ತು ನೇಪಾಳದಾದ್ಯಂತ ರಕ್ತದಾನ ಶಿಬಿರದ ಮೂಲಕ ಒಂದು ಲಕ್ಷ ಯೂನಿಟ್ ರಕ್ತ ಸಂಗ್ರಹಿಸಿ ಗಿನ್ನೆಸ್ ವಿಶ್ವದಾಖಲೆ ಸ್ಥಾಪಿಸಲು ಸಜ್ಜಗೊಂಡಿದೆ ಎಂದು ಹೇಳಿದರು.
ಒಟ್ಟಾರೆ ಸಂಗ್ರಹಿಸಿದ ರಕ್ತವನ್ನು ಸಾರ್ವಜನಿಕ ಆರೋಗ್ಯಕ್ಕಾಗಿ ನೀಡುವ ಗುರಿಯನ್ನು ಹೊಂದಿದೆ. ನಗರದಲ್ಲಿ ಹಮ್ಮಿಕೊಂಡಿರುವ ರಕ್ತದಾನ ಶಿಬಿರದಲ್ಲಿ 250ಕ್ಕೂ ಹೆಚ್ಚು ರಕ್ತದಾನಿಗಳು ಪಾಲ್ಗೂಳುವ ವಿಶ್ವಾಸವಿದೆ ಎಂದರು.