

ಮೈಸೂರು: ಅಖಿಲ ಭಾರತೀಯ ತೇರಾಪಂಥ್ ಯುವಕ ಪರಿಷತ್ ವತಿಯಿಂದ ಸೆ.17 ರಂದು ನಗರದ ವಿವಿಧೆಡೆ ರಕ್ತದಾನ ಶಿಬಿರ ಹಮ್ಮಿಕೊಂಡಿದೆ ಎಂದು ಸಂಘದ ಅಧ್ಯಕ್ಷ ವಿಕಾಸ್ ಗಾಂಧಿ ಮೆಹ್ತಾ ಹೇಳಿದರು.
ರಕ್ತದಾನ ಶಿಬಿರಕೋಸ್ಕರ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಸ್‌ನಲ್ಲಿ ಏಕಕಾಲದಲ್ಲಿ ಇಬ್ಬರು ದಾನಿಗಳು ರಕ್ತದಾನ ಮಾಡಬಹುದು. ನಗರದ ಎಂ.ಜಿ. ರಸ್ತೆಯ ತೇರಾಪಂಥ್ ಭವನ, ಜೆಎಲ್‌ಬಿ ರಸ್ತೆಯ ರೋಟರಿ ಶಾಲೆ, ಅಶೋಕ ರಸ್ತೆಯ ಶ್ರೀ ಕನ್ಯಕಾ ಮಹಲ್, ನಜರ್‌ಬಾದ್‌ನ ರಾಜಗೋಪಾಲ್ ರಾವ್ ರಶಿಂಕರ್ ಕಲ್ಯಾಣ ಮಂಟಪ, ಕುವೆಂಪುನಗರದ ಜಿಎಸ್‌ಎಸ್ ಕಚೇರಿ ಮತ್ತು ಶ್ರೀ ಸಾಯಿ ಎಲೆಕ್ಟ್ರಾನಿಕ್ಸ್, ಬನ್ನೂರು ರಸ್ತೆ, ವಿಜಯನಗರ ಕೊಡವ ಸಮಾಜ, ಚಾಮುಂಬಿಟ್ಟ ರಸ್ತೆಯ ಎಸ್‌ಡಿಎಂಐಎಂಡಿ, ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು, ಸಾತಗಳ್ಳಿಯ ವಿಟಿಯುನಲ್ಲಿ ರಕ್ತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು. ಇದಲ್ಲದೆ ಎಚ್.ಡಿ ಕೋಟೆ, ಕೆ.ಆರ್. ನಗರ ಹಾಗೂ ಶ್ರೀರಂಗಪಟ್ಟಣದಲ್ಲಿ ಶಿಬಿರ ಏರ್ಪಡಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.