

ಬೆಳ್ತಂಗಡಿ: ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ನೇತೃತ್ವದಲ್ಲಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಹಳೆಕೋಟೆ ಬೆಳ್ತಂಗಡಿ, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ, ಸ್ಪಂದನ ಸೇವಾ ಸಂಘ ಬೆಳ್ತಂಗಡಿ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ವಾಣಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಉದ್ಘಾಟಿಸಿದರು. ಕಿರಣ್ ಚಂದ್ರ ಪುಷ್ಪಗಿರಿ ಆರ್ಥಿಕ ಸಹಕಾರ ನೀಡಿದರು. 72 ದಾನಿಗಳು ರಕ್ತದಾನ ಮಾಡಿದರು, ರಕ್ತದಾನಿಗಳಿಗೆ ಸಸ್ಯ ವಿತರಣೆ ನಡೆಯಿತು.
ಮಲವಂತಿಗೆ ಗ್ರಾಮದ ಜಾಲು ನಿವಾಸಿ ಕೃಷ್ಣ ಗೌಡ ಅವರಿಗೆ ಗಾಲಿ ಕುರ್ಚಿ ವಿತರಣೆ ಮಾಡಲಾಯಿತು ಹಾಗೂ ಸ್ಪಂದನ ಸೇವಾ ಸಂಘದಿಂದ ಆರ್ಥಿಕ ಹಿಂದುಳಿದ 6 ಕುಟುಂಬಗಳಿಗೆ ತಲಾ 10,000 ರೂ. ಚೆಕ್ ವಿತರಿಸಲಾಯಿತು.
ತಾಲೂಕು ಮಟ್ಟದ ಕೆಸರ್ ಕಂಡೊಡು ಗೌಜಿ ಗಮ್ಮತ್ ಕ್ರೀಡಾಕೂಟದಲ್ಲಿ ಉಳಿತಾಯವಾದ ಮೊತ್ತದಲ್ಲಿ 50 ಸಾವಿರ ರೂ.ಚೆಕ್ಕನ್ನು ಸ್ಪಂದನ ಸೇವಾ ಸಂಘಕ್ಕೆ ಹಸ್ತಾಂತರಿಸಲಾಯಿತು.
ಸ್ಪಂದನ ಸೇವಾ ಸಂಘದ ಸಂಚಾಲಕ ಮೋಹನ್ ಗೌಡ, ತಾಲೂಕು ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷ ಗೀತಾ ರಾಮಣ್ಣ ಗೌಡ, ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಂಚಾಲಕ ಪ್ರವೀಣ್ ಕುಮಾರ್, ತಾಲೂಕು ಸಮಿತಿ ನಿರ್ದೇಶಕರಾದ ಜಯಾನಂದ ಗೌಡ ಬೆಳ್ತಂಗಡಿ, ಮಾಧವ ಗೌಡ ಬೆಳ್ತಂಗಡಿ, ದಿನೇಶ್ ಗೌಡ ಕೊಯ್ಯೂರು, ಗೌರವಾಧ್ಯಕ್ಷರು, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಪದ್ಮ ಗೌಡ ಬೆಳಾಲು, ನಿರ್ದೇಶಕ ಪುರಂದರ ಮೊಗ್ರು, ವಾಣಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರಸಾದ್ ಕಡ್ತಿಯಾರ್, ಮಹಿಳಾ ವೇದಿಕೆಯ ಜೊತೆ ಕಾರ್ಯದರ್ಶಿ ಮೀನಾಕ್ಷಿ ಮಹಾಬಲ ಗೌಡ, ಪೂರ್ಣಿಮಾ ಜಂಕಿನಡ್ಕ, ಯುವ ವೇದಿಕೆ ಉಪಾಧ್ಯಕ್ಷರಾದ ಪ್ರಶಾಂತ್ ಅಂತರ ಕಡಿರುದ್ಯಾವರ, ನಿತಿನ್ ಕನ್ಯಾಡಿ ಸಂಘಟನಾ ಕಾರ್ಯದರ್ಶಿ ಪ್ರಮೋದ್ ದಿಡುಪೆ, ಕ್ರೀಡಾ ಕಾರ್ಯದರ್ಶಿ ಗಿರೀಶ್ ನಿಡ್ಲೆ, ಹೇಮಂತ್ ಕಳಿಯ, ಪ್ರದೀಪ್ ನಾಗಾಜೆ, ಭರತ್ ಪುದುವೆಟ್ಟು, ತೀಕ್ಷಿತ್ ದಿಡುಪೆ, ಪ್ರಸಾದ್ ಅಡಿಮಾರು ಚಾರ್ಮಾಡಿ, ಕಿಶಾನ್ ಸವಣಾಲು, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಸೋಮಂತ್ತಡ್ಕ ಶಾಖಾ ವ್ಯವಸ್ಥಾಪಕರಾದ ಉಮೇಶ್ ಮೈರ್ನೋಡಿ, ಕಲ್ಲೇರಿ ಶಾಖಾ ವ್ಯವಸ್ಥಾಪಕರಾದ ನಿತೇಶ್ ಬೆಳ್ತಂಗಡಿ, ಸಿಬ್ಬಂದಿಗಳಾದ ಚರಣ್ ಬೈಪಾಡಿ, ಶೋದನ್ ಬೈಪಾಡಿ, ಯುವ ವೇದಿಕೆ ಮತ್ತು ಮಹಿಳಾವೇದಿಕೆ ಸದಸ್ಯರು ಉಪಸ್ಥಿತರಿದ್ದರು.
ತಾಲೂಕು ಯುವ ವೇದಿಕೆಯ ಕಾನೂನು ಸಲಹೆಗಾರ ನವೀನ್ ಬಿ.ಕೆ.ನಿರೂಪಿಸಿ ಯುವ ವೇದಿಕೆಯ ಕಾರ್ಯದರ್ಶಿ ಸುರೇಶ್ ಕೌಡಂಗೆ ವಂದಿಸಿದರು.