ಮಾಸಾಶನ ವಿತರಣೆಗೆ ಒತ್ತಾಯ: ಕಂಪ್ಲಿಯಲ್ಲಿ ನಗರಾಭಿವೃದ್ಧಿ ನೇತೃತ್ವದಲ್ಲಿ ಫಲಾನುಭವಿಗಳ ಪ್ರತಿಭಟನೆ

210121 Kampli Urban Development Struggle Committee Protest
ಕಂಪ್ಲಿಯಲ್ಲಿ ಶಿರಸ್ತೇದಾರ್ ಪಂಪಾಪತಿಗೆ ಕಂಪ್ಲಿ ನಗರಾಭಿವೃದ್ಧಿ ಹೋರಾಟ ಸಮಿತಿ ಮನವಿ ಸಲ್ಲಿಸಿತು.
Published on

ಕಂಪ್ಲಿ: ವಿವಿಧ ಮಾಸಾಶನ ನೀಡುವಂತೆ ಒತ್ತಾಯಿಸಿ ಕಂಪ್ಲಿ ನಗರಾಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಫಲಾನುಭವಿಗಳು ಗುರುವಾರ ತಹಸಿಲ್ ಕಚೇರಿ ಶಿರಸ್ತೇದಾರ್ ಪಂಪಾಪತಿಗೆ ಮನವಿ ಸಲ್ಲಿಸಿದರು.

ಸಮಿತಿ ಅಧ್ಯಕ್ಷ ಕೃಷ್ಣ ಎಸ್.ಪೋಳ್ ಮಾತನಾಡಿ, ಕಳೆದೊಂದು ವರ್ಷದಿಂದ ಸಾಮಾಜಿಕ ಭದ್ರತೆ ಯೋಜನೆಯಡಿ ವೃದ್ಧರು, ವಿಧವೆಯರು ಸೇರಿ ಸಾಕಷ್ಟು ಫಲಾನುಭವಿಗಳಿಗೆ ಮಾಸಾಶನ ವಿತರಿಸಿಲ್ಲ. ಇದರಿಂದ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಪಿಂಚಣಿ ನಂಬಿ ಬಹುತೇಕರು ಜೀವಿಸುತ್ತಿದ್ದು, ಪ್ರತಿ ತಿಂಗಳು ಬ್ಯಾಂಕ್ ಮತ್ತು ಅಂಚೆ ಕಚೇರಿ ಅಲೆದು ಸುಸ್ತಾಗುತ್ತಿದ್ದಾರೆ. ಏಕಾಏಕಿ ಮಾಸಾಶನ ನಿಂತಿದ್ದರಿಂದ ತುಂಬಾ ತೊಂದರೆಯಾಗಿದೆ. ಪಿಂಚಣಿ ಪಾವತಿಗೆ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಮಿತಿ ಪದಾಧಿಕಾರಿಗಳಾದ ಎಂ.ಉಸ್ಮಾನ್, ಟಿ.ಎಚ್.ಎಂ.ರಾಜಕುಮಾರ್, ಎಂ.ಚಂದ್ರಶೇಖರ್, ಡೆಕೋರೇಟರ್ ನಾಗರಾಜ್, ಕೆ.ಮೆಹಬೂಬ್, ಇಸ್ಮಾಯಿಲ್ ಬೇಗ್, ಬಿ.ಹರ್ಷವರ್ಧನ ರೆಡ್ಡಿ, ಫ್ರಾನ್ಸೀಸ್, ಕಟ್ಟೆ ವೀರೇಶ್, ಅದ್ದಪ್ಪ ತಿಮ್ಮಪ್ಪ, ಬೆಟ್ಟದ ರಮೇಶ್, ಧನರಾಜ್, ಮಂಗಳಮುಖಿಯರಾದ ಅಮೃತಾ, ಸೋನು, ಅಂಜಲಿ, ಶ್ವೇತಾ, ಗೊಂಬೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net