

ಮದ್ದೂರು: ಮದ್ದೂರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶಾಲಾ ಕಾಲೇಜುಗಳು ಸೇರಿದಂತೆ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಸಾಮೂಹಿಕ ಯೋಗ ಆಚರಿಸಲಾಯಿತು.
ಪತಂಜಲಿ ಯೋಗ ಶಿಬಿರ, ಪಟ್ಟಣದ ಗ್ಲೋಬಲ್ ಇಂಟರ್‌ನ್ಯಾಷನಲ್ ಸ್ಕೂಲ್, ಶ್ರೀ ರಾಘವೇಂದ್ರ ಸೇವಾ ಸಂಸ್ಥೆ ಇನ್ನಿತರೆಡೆ ಶನಿವಾರ ಬೆಳಗಿನಿಂದಲೇ ಯೋಗ ತರಗತಿಗಳಲ್ಲಿ ಯೋಗ, ಧ್ಯಾನ ನಡೆಯಿತು.
ಪಟ್ಟಣದ ಶ್ರೀ ಸರ್ವಶಿವ ಎಜುಕೇಷನ್ ಟ್ರಸ್ಟ್‌ನ ಗ್ಲೋಬಲ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಯೋಗಪಟು ಶಿವಪುರ ಮಂಜು ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಯೋಗ ಭಂಗಿಗಳು, ಧ್ಯಾನ, ಯೋಗ ಮತ್ತು ಯೋಗ ದಿನದ ಮಹತ್ವ ಕುರಿತು ವಿವರಣೆ ನೀಡಿದರು.
ಒಂದು ತಾಸಿಗೂ ಹೆಚ್ಚು ಕಾಲ ನಡೆದ ಶಿಬಿರದ ವೇಳೆ ನೂರಾರು ಮಕ್ಕಳು ಪಾಲ್ಗೊಂಡು ಯೋಗ ಸಂಬಂಧ ವಿವಿಧ ಆಯಾಮಗಳಲ್ಲಿ ಭಾಗವಹಿಸುವ ಜತೆಗೆ ಪ್ರದರ್ಶನ ನೀಡಿದರು. ಸಂಸ್ಥೆಯ ಅಧ್ಯಕ್ಷ ಶಿವನಂಜಯ್ಯ, ಕಾರ್ಯ ನಿರ್ವಹಣಾಧಿಕಾರಿ ಎಂ.ಎಸ್.ಸಂತೋಷ್‌ಗೌಡ, ಮುಖ್ಯ ಶಿಕ್ಷಕಿ ಎ.ವಿ.ಪಾವನಾ, ಪುರಸಭೆ ಸದಸ್ಯೆ ಬಿ.ಸಿ.ಸರ್ವಮಂಗಳ, ಎಂ.ಎಂ.ಕಲ್ಪಿತಾ, ಸಹ ಶಿಕ್ಷಕರಾದ ವಿ.ಟಿ.ಮೀನಾ, ಸಿಂಧು, ಕಾಂಚನಾ, ಶೃತಿ, ಸುಮಯ್ಯ, ಜ್ಯೋತಿ ಇತರರಿದ್ದರು.