ಸಾಮೂಹಿಕ ವಿವಾಹ ದುಂದು ವೆಚ್ಚಕ್ಕೆ ಕಡಿವಾಣ

Manvi Kannapurahatti Mass Wedding
ಮುದಗಲ್ ಸಮೀಪದ ಕನ್ನಾಪುರಹಟ್ಟಿಯಲ್ಲಿ ಶ್ರೀಪರಮಾನಂದ ಮತ್ತು ಶ್ರೀಅಮೋಘ ಸಿದ್ದೇಶ್ವರ ಜಾತ್ರೆ ಅಂಗವಾಗಿ ಗುರುವಾರ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
Published on

ಮುದಗಲ್: ಸಾಮೂಹಿಕ ವಿವಾಹ ನಡೆಸುವ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಜೆಡಿಎಸ್ ಮುಖಂಡ ಸಿದ್ದು ಬಂಡಿ ಹೇಳಿದರು. ಸಮೀಪದ ಕನ್ನಾಪುರಹಟ್ಟಿಯಲ್ಲಿ ಶ್ರೀಪರಮಾನಂದ ಮತ್ತು ಶ್ರೀಅಮೋಘ ಸಿದ್ದೇಶ್ವರ ಜಾತ್ರೆ ಅಂಗವಾಗಿ ಗುರುವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅನೇಕ ವರ್ಷಗಳಿಂದ ತಮ್ಮ ಮನೆತನದಿಂದ ಪ್ರತಿವರ್ಷ ನೂರಾರು ಸಾಮೂಹಿಕ ವಿವಾಹ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಕನ್ನಾಪುರಹಟ್ಟಿಯ ಎಲ್ಲ ಸಮುದಾಯ ಒಗ್ಗಟ್ಟಿನಿಂದ ಕೈಜೋಡಿಸುತ್ತಿರುವುದು ಶ್ಲಾಘನಿಯ ಎಂದರು. ಲಿಂಗಸುಗೂರು ಪಿಎಲ್‌ಡಿ.ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಪಾಟೀಲ್, ಜಿಪಂ.ಮಾಜಿ ಸದಸ್ಯ ಹನುಮಂತಪ್ಪ ಕಂದಗಲ್, ತಾಪಂ ಮಾಜಿ ಸದಸ್ಯ ಗುಂಡಪ್ಪ ಸಾಹುಕಾರ ಮಾತನಾಡಿದರು.

ಸಿರಗುಪ್ಪಿಯ ಶ್ರೀಅಮೋಘ ಸಿದ್ದೇಶ್ವರ ಸ್ವಾಮೀಜಿ, ಹುನಕುಂಟಿಯ ಚಿದಾನಂದಯ್ಯ ಗುರುವಿನ್ ಮುಖಂಡರಾದ ಬಸವರಾಜ ಲೆಕ್ಕಿಹಾಳ, ಹೊನ್ನಪ್ಪ ಮೇಟಿ, ಬಸಯ್ಯ ಸ್ವಾಮಿ, ಶಿವಶಂಕರಯ್ಯ, ಶೇಖರಯ್ಯ ಒಡೆಯರ್, ಅಮರಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net