ವಿಪ್ರ ವಿಹಿತ ನಿತ್ಯ ಕಮಾರ್ನುಷ್ಠಾನ ನಡೆಸಿ...

Pejavara
Published on

ಪೇಜಾವರ ವಿಶ್ವಪ್ರಸನ್ನ ಶ್ರೀ ಆಶೀರ್ವಚನ

ದೆಹಲಿಯ ಮಠದಲ್ಲಿ ಸಾಮೂಹಿಕ ಉಪನಯನ

ವಿಜಯವಾಣಿ ಸುದ್ದಿಜಾಲ ಉಡುಪಿ

ಬ್ರಾಹ್ಮಣ ಸಮುದಾಯದಲ್ಲಿ ಉಪನಯನ ಎನ್ನುವುದು ಬದುಕಿನ ಅತ್ಯಂತ ಮಹತ್ವದ ಭಾಗ. ಅದೊಂದು ವಿಶೇಷ ಸಂಸ್ಕಾರ. ಜನಿವಾರ ಧರಿಸಿದ ವಟುಗಳೆಲ್ಲರೂ ವಿಪ್ರ ವಿಹಿತ ನಿತ್ಯ ಕಮಾರ್ನುಷ್ಠಾನಗಳನ್ನು ಅವಶ್ಯವಾಗಿ ಮಾಡಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನುಡಿದರು.

Pejavara Shree
ನವದೆಹಲಿಯ ವಸಂತ ಕುಂಜ್​ ಎಂಬಲ್ಲಿರುವ ಪೇಜಾವರ ಮಠದ ಶಾಖೆಯಾದ ಶ್ರೀಕೃಷ್ಣ ಧಾಮದಲ್ಲಿ ಮೇ 25ರಂದು ಆಯೋಜಿಸಿದ್ದ ಸಾಮೂಹಿಕ ಉಪನಯನ ಸಂಸ್ಕಾರ ಸಮಾರಂಭದಲ್ಲಿ ಜನಿವಾರ ಧರಿಸಿದ 31 ವಿಪ್ರ ಬಾಲಕರಿಗೆ ಸಂದೇಶಾಶೀರ್ವಚನ ನೀಡಿದರು. ಎಲ್ಲ ಮಕ್ಕಳಿಗೂ ನಾರಾಯಣ ಅಷ್ಟಾಕ್ಷರ ಮಂತ್ರೋಪದೇಶ ನೀಡಿ ತಪ್ತಮುದ್ರಾ ಧಾರಣೆಗೈದು ಆಶೀರ್ವದಿಸಿದರು.

ವಿಪ್ರ ಬಾಲಕರಿಗೆ ಉಚಿತ ಶಿಕ್ಷಣ

ಬಿಹಾರ ಮತ್ತು ಉತ್ತರ ಪ್ರದೇಶಗ ರಾಜ್ಯಗಳಲ್ಲಿ ಬಡತನದಲ್ಲಿರುವ ಬ್ರಾಹ್ಮಣರ ಕುಟುಂಬದ ಮಕ್ಕಳನ್ನು ಕಳೆದ ವರ್ಷದಿಂದ ದೆಹಲಿಯ ಮಠಕ್ಕೆ ಕರೆತಂದು, ಅಲ್ಲಿನ ವೇದವ್ಯಾಸ ಗುರುಕುಲದಲ್ಲಿ ಸಂಪೂರ್ಣ ಉಚಿತವಾಗಿ ವಸತಿ, ಊಟೋಪಹಾರ ಸಹಿತ ಶಿಕ್ಷಣ ನೀಡಲಾಗುತ್ತಿದೆ. ಅವರಲ್ಲಿ ಅರ್ಹತೆ ಹೊಂದಿರುವ ಬಾಲಕರಿಗೆ ಶ್ರೀಮಠದ ವತಿಯಿಂದಲೇ ಸಾಮೂಹಿಕ ಉಪನಯನ ಸಂಸ್ಕಾರವನ್ನೂ ನಡೆಸಲಾಗುತ್ತದೆ.

ಗುರುಕುಲದ ಪ್ರಾಚಾರ್ಯ ಡಾ.ವಿಠೋಬ ಆಚಾರ್ಯ ನೇತೃತ್ವದಲ್ಲಿ ಋತ್ವಿಜರು ಧಾರ್ಮಿಕ ವಿಧಿ ನೆರವೇರಿಸಿದರು. ನವದೆಹಲಿ ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಡಾ. ಶ್ರೀನಿವಾಸ ಆಚಾರ್ಯ ವರಖೇಡಿ, ಶ್ರೀನಿಧಿ ಆಚಾರ್ಯ, ಮಠದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ನೂರಾರು ಮಂದಿ ಉಪಸ್ಥಿತರಿದ್ದರು.

ಬಾಲಕರು, ಪಾಲಕರಿಗೆ ಹೊಸ ವಸ್ತ್ರ, ಧಾರ್ಮಿಕ ವಿಧಿ, ನೂರಾರು ಜನರಿಗೆ ಭೋಜನ ವ್ಯವಸ್ಥೆ ಸಹಿತ ಸಮಾರಂಭದ ಎಲ್ಲ ವೆಚ್ಚವನ್ನೂ ಶ್ರೀಮಠವೇ ಭರಿಸುತ್ತದೆ. ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಸಾಮೂಹಿಕ ಉಪನಯನ ಸಂಸ್ಕಾರ ವೈಭವದಿಂದ ನೆರವೇರಿತು. | ಡಾ.ವಿಠೋಬ ಆಚಾರ್ಯ. ದೆಹಲಿ ಗುರುಕುಲದ ಪ್ರಾಚಾರ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net