ರಾಷ್ಟ್ರೊತ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

30 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಮುಮ್ಮಿಗಟ್ಟಿಯ ರಾಷ್ಟ್ರೊತ್ಥಾನ ವಿದ್ಯಾಲಯದಲ್ಲಿ ದುರ್ಗಾ ಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಶನಿವಾರ ವಿಜೃಂಭಣೆಯಿಂದ ನೆರವೇರಿಸಲಾಯಿತು.

ವಿದ್ಯಾ ಕೇಂದ್ರದ ಪ್ರಧಾನ ಅರ್ಚಕರಾದ ಹರ್ಷ ಭಟ್ಟ, ರಾಮಚಂದ್ರ ಭಟ್ಟ ಹಾಗೂ ವಿದ್ವಾನ್​ ಸೂರ್ಯ ನಾರಾಯಣ ಅವರ ನೇತೃತ್ವದಲ್ಲಿ ರಾಘವೇಂದ್ರ ಅಂಬೇಕರ ದಂಪತಿ ಪೂಜೆ ನೆರವೇರಿಸಿದರು.

ನಂತರ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾ ಕೇಂದ್ರದ ಕಾರ್ಯದರ್ಶಿ ರಾಘವೇಂದ್ರ ಅಂಬೇಕರ ಮಾತನಾಡಿ, ಎಲ್ಲ ಪಾಲಕರ, ಬಂಧುಗಳ ಪರವಾಗಿ ಪ್ರತಿ ವರ್ಷ ಸತ್ಯನಾರಾಯಣ ಪೂಜೆ ನೆರವೇರಿಸಲಾಗುತ್ತಿದೆ ಎಂದರು.

ವಿದ್ಯಾಲಯದ ಅಧ್ಯಕ್ಷ ಡಾ. ಎಸ್​.ಆರ್​. ರಾಮನಗೌಡರ, ಪರಿಷತ್ತಿನ ಹಿರಿಯರಾದ ಅಶೋಕ ಸೋನಕರ ಮಾತನಾಡಿದರು. ಹಿತೈಷಿಗಳಾದ ಮಹದೇವಪ್ಪ ದಂಡಿನ, ಸಿ.ಎಸ್​. ಪಾಟೀಲ, ಎಸ್​.ಆರ್​. ಪಾಟೀಲ, ರೇಖಾ ಅಂಬೇಕರ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಕ್ರಿಯಾ ಸಮಿತಿ ಸದಸ್ಯರು, ಇತರರು ಇದ್ದರು.

ರೇಖಾ ಯಲಿಗಾರ ಸ್ವಾಗತಿಸಿದರು. ಸಂತೋಷ ತೋಟಗಿ ನಿರೂಪಿಸಿದರು. ಮಹಾಂತೇಶ ಮಠಪತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net