ಸಾಮೂಹಿಕ ಶಿವ ನಮಸ್ಕಾರ

shiva namaskar
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮಹಾ ಶಿವರಾತ್ರಿ ನಿಮಿತ್ತ ನಗರದ ಪ್ರಸಿದ್ಧ ಶ್ರೀ ಸಿದ್ಧಾರೂಢ ಸ್ವಾಮಿ ಮಠ ಅವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಯೋಗ ಸ್ಪರ್ಶ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ಸಾಮೂಹಿಕ ಶಿವ ನಮಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಠದ ಧರ್ಮದರ್ಶಿ ಗೀತಾ ಕಲಬುರ್ಗಿ ಮಾತನಾಡಿ, ಶಿವನ ಆರಾಧನೆಯಿಂದ ಜೀವನ ಪಾವನಗೊಳ್ಳುತ್ತದೆ. ಸಮಿತಿಯು ಪ್ರತಿ ವರ್ಷ ಮಠದ ಅವರಣದಲ್ಲಿ ಸಾಮೂಹಿಕ ಶಿವ ನಮಸ್ಕಾರ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯವಾದುದು ಎಂದರು.

ಮಾಜಿ ಧರ್ಮದರ್ಶಿ ರಂಗಾ ಬದ್ದಿ ಮಾತನಾಡಿ, ಸಮಿತಿ ಹಮ್ಮಿಕೊಳ್ಳುವ ಇಂಥ ಕಾರ್ಯಕ್ರಮಗಳಿಂದ ಜನರಲ್ಲಿ ಆರೋಗ್ಯದ ಜತೆಗೆ ಭಾರತೀಯ ಸಂಸ್ಕೃತಿಯ ಪಾಲನೆ ಕೂಡ ಆಗುತ್ತದೆ ಎಂದು ಹೇಳಿದರು.

ಸಮಿತಿಯ ಯೋಗ ಶಿಕ್ಷಕಿ ಸ್ನೇಹ ಬಾಡಗಿ, ಶಿವ ನಮಸ್ಕಾರದ ಮಹತ್ವ ವಿವರಿಸಿದರು. ಶಿವಶಂಕರ ಗಾಣಿಗೇರ ಅಧ್ಯಕ್ಷತೆ ವಹಿಸಿದ್ದರು.

ಶಿವ ನಮಸ್ಕಾರ ಕಾರ್ಯಕ್ರಮದ ಸಂಚಾಲಕ ದತ್ತಾತ್ರೇಯ ಹೆಗಡೆ, ಸಂಚಾಲಕಿ ಮಂಜುಳಾ ನಾಗಶೆಟ್ಟಿ, ಜಿಲ್ಲಾ ಸಂಚಾಲಕ ಗೋಪಾಲ ಜೋಶಿ, ಜಿಲ್ಲಾ ಸಂಚಾಲಕಿ ಅಮರಾವತಿ ಗಾಣಗಿ, ಯೋಗ ಸ್ಪರ್ಶ ಪ್ರತಿಷ್ಠಾನದ ಅಧ್ಯಕ್ಷ: ದಯಾನಂದ ಮಗಜಿಕೊಂಡಿ, ಯೋಗ ಬಂಧುಗಳು, ಸಾರ್ವಜನಿಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net