

ಬೆಟ್ಟದಪುರ: ಮಹಿಳಾ ಸಬಲೀಕರಣ ವಿಚಾರದಲ್ಲಿ ಸರ್ಕಾರ ನೀಡದಂತಹ ಯೋಜನೆಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡುತ್ತಿರುವುದು ಶ್ಲಾಘನೀಯ ವಿಷಯ ಎಂದು ರಾವಂದೂರಿನ ಮುರುಘ ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ನುಡಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಗಾಲು ವಲಯ ದವತಿಯಿಂದ ಇತ್ತೀಚೆಗೆ ರಾಜನಬಿಳಗೂಲಿ ಗ್ರಾಮದ ಶ್ರೀ ದೊಡ್ಡಮ್ಮ, ಚಿಕ್ಕಮ್ಮ ದೇವಾಲಯ ಆವರಣದಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜಾ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಕ್ತಿ, ಭಾವ, ದಾನ ಹಾಗೂ ವೀರೇಂದ್ರ ಹೆಗ್ಗಡೆ ಅವರ ಸಾಮಾಜಿಕ ಕಾರ್ಯಗಳು, ಮದ್ಯವರ್ಜನ ಶಿಬಿರಗಳು ಆಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಹೊಸ ಜೀವನ ರೂಪಿಸಿದೆ ಎಂದರು.
ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಯೋಜನೆ ನಡೆದು ಬಂದ ಹಾದಿ, ಮಹಿಳಾ ಸಬಲೀಕರಣ, ಯೋಜನೆಯ ಸಾಧನೆ, ಬ್ಯಾಂಕ್ ಒಡಂಬಡಿಕೆ, ಪಾತ್ರ, ಸಾಮಾಜಿಕ, ಧಾರ್ಮಿಕ ಪಾತ್ರ, ಗ್ರಾಮ ಅಭಿವೃದ್ಧಿ ಯೋಜನೆಯ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸುಜ್ಞಾನ ನಿಧಿ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು. ಹಲಗನಹಳ್ಳಿ ಗ್ರಾ.ಪಂ ಅಧ್ಯಕ್ಷೆ ವೀಣಾವೆಂಕಟೇಶ್, ಉಪಾಧ್ಯಕ್ಷೆ ಮೀನಾಕ್ಷಿ ಜಗದೀಶ್, ಪೂಜಾ ಕಾರ್ಯಕ್ರಮದ ಅಧ್ಯಕ್ಷ ಆರ್.ಎಸ್.ಪ್ರಸನ್ನ , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯರಾದ ಕೆ.ಮಹದೇವ, ಗ್ರಾ.ಪಂ ಸದಸ್ಯರಾದ ಗೀತಾ ಮಹದೇವ್, ಆರ್.ಎಸ್. ಸಂತೋಷ್, ಮುಖಂಡರಾದ ಶಂಕರೇಗೌಡ, ರವಿಗೌಡ, ಅಪ್ಪಣ್ಣೇಗೌಡ, ರಾಜೇಗೌಡ, ತಮ್ಮೇಗೌಡ, ಆರ್.ಎಸ್. ತಿಮ್ಮೆಗೌಡ, ಮೊಹಮ್ಮದ್ ಅತ್ತಾರ್, ಶಾಲೆಯ ಮುಖ್ಯಶಿಕ್ಷಕ ಮಲ್ಲೇಶ್, ಸಾಮೂಹಿಕ ಸತ್ಯ ನಾರಾಯಣಸ್ವಾಮಿ ಪೂಜಾ ಸಮಿತಿ ಪದಾಧಿಕಾರಿಗಳಾದ ಎಚ್.ಎಸ್. ಮಹದೇವ್, ಚಂದ್ರಪ್ಪ, ವೈರಮುಡಿ ಐಚನಹಳ್ಳಿ, ಹರೀಶ್, ಯೋಜನಾಧಿಕಾರಿ ಸಂತೋಷ್ ಸೇರಿದಂತೆ ಇತರರು ಇದ್ದರು.