

ಹುಬ್ಬಳ್ಳಿ: ಶ್ರೀರಾಮ ಸೇನೆ ಹು-ಧಾ ಮಹಾನಗರ ಜಿಲ್ಲಾ ಘಟಕದಿಂದ ಆ. 27ರಂದು ಮಧ್ಯಾಹ್ನ 12ಕ್ಕೆ ಕಾರವಾರ ರಸ್ತೆಯ ಗೋ ಶಾಲೆ ಆವರಣದ ಪಾಂಜರಪೋಳ ಕಚೇರಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಜಿಲ್ಲಾ ಬೈಠಕ್ ಏರ್ಪಡಿಸಲಾಗಿದೆ. ಶ್ರೀ ಸತ್ಯಪ್ರಮೋದೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾಜ್ಯ ಅಧ್ಯಕ್ಷ ಗಂಗಾಧರ ಕುಲಕರ್ಣಿ, ಕಾರ್ಯದರ್ಶಿ ರಾಜು ಖಾನಪ್ಪನವರ ಮುಖ್ಯ ವಕ್ತಾರರಾಗಿ ಆಗಮಿಸುವರು. ನ್ಯಾಯವಾದಿ ಗೌರಿಶಂಕರ ಮೊಟ್, ಚಿಗುರು ಸ್ಕೂಲ್ ಸಂಸ್ಥಾಪಕ ಮಂಜುನಾಥ ಅಮವಾಸಿ, ಉದ್ಯಮಿ ಸುರೇಶ ಅಂಗಡಿ ಇತರರು ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.