ಕಾಞಂಗಾಡಿನಲ್ಲಿ ಸಾಮೂಹಿಕ ಓಟ, ಅಂತಾರಾಷ್ಟ್ರೀಯ ಒಲಿಂಪಿಕ್ ದಿನ ಪ್ರಯುಕ್ತ ಆಯೋಜನೆ

KSD-23JUNE-4
ಒಲಿಂಪಿಕ್ ದಿನದ ಅಂಗವಾಗಿ ಆಯೋಜಿಸಲಾದ ಸಾಮೂಹಿಕ ಓಟಕ್ಕೆ ಅಂತಾರಾಷ್ಟ್ರೀಯ ಕ್ರೀಡಾ ತಾರೆಗಳಾದ ಜಗದೀಶ್ ಕುಂಬಳೆ, ಕೆ.ಎಸ್.ಎಸ್.ಮ್ಯಾಥ್ಯೂ, ಅಂಜು ಬಾಲಕೃಷ್ಣನ್ ಜತೆಯಾಗಿ ಚಾಲನೆ ನೀಡಿದರು.
Published on

ಕಾಸರಗೋಡು: ಅಂತಾರಾಷ್ಟ್ರೀಯ ಒಲಿಂಪಿಕ್ ದಿನದ ಅಂಗವಾಗಿ ಜಿಲ್ಲಾ ಒಲಿಂಪಿಕ್ ಅಸೋಸಿಯೇಷನ್ ವತಿಯಿಂದ ಶನಿವಾರ ಸಾಮೂಹಿಕ ಓಟ ಆಯೋಜಿಸಲಾಯಿತು. ಕಾಞಂಗಾಡ್ ಹಳೇ ಬಸ್ ನಿಲ್ದಾಣದಿಂದ ಆರಂಭವಾದ ಓಟ ಹೊಸ ಬಸ್ ನಿಲ್ದಾಣದ ಸಮೀಪ ಕೊನೆಗೊಂಡಿತು.

ಅಂತಾರಾಷ್ಟ್ರೀಯ ಕ್ರೀಡಾ ತಾರೆಗಳಾದ ಕೆ.ಎಸ್.ಎಸ್.ಮ್ಯಾಥ್ಯೂ, ಅಂಜು ಬಾಲಕೃಷ್ಣನ್, ಜಗದೀಶ್ ಕುಂಬಳೆ, ಮನೋಜ್ ಅಚ್ಚಂತುರುತ್ತಿ, ಅನ್ವಿದಾ ಅನಿಲ್, ಆರ್ಯಶ್ರೀ ಮತ್ತು ಮಾಳವಿಕಾ ಜತೆಯಾಗಿ ಹಸಿರು ನಿಶಾನೆ ತೋರಿ ಸಾಮೂಹಿಕ ಓಟಕ್ಕೆ ಚಾಲನೆ ನೀಡಿದರು.

ಬಳಿಕ ನಡೆದ ಸಮಾರೋಪದಲ್ಲಿ ಒಲಿಂಪಿಯನ್ ಕೆ.ಎಸ್ ಮ್ಯಾಥ್ಯೂ ಒಲಿಂಪಿಕ್ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು. ಶಾಸಕ ಇ.ಚಂದ್ರಶೇಖರನ್ ಒಲಿಂಪಿಕ್ ದಿನಾಚರಣೆ ಉದ್ಘಾಟಿಸಿದರು. ಜಿಲ್ಲಾ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಟಿ.ವಿ.ಬಾಲನ್ ಅಧ್ಯಕ್ಷತೆ ವಹಿಸಿದ್ದರು. ಅಂಜು ಬಾಲಕೃಷ್ಣನ್ ಮತ್ತು ನಗರಸಭೆ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ ಉಪಸ್ಥಿತರಿದ್ದರು.

ಜಿಲ್ಲಾ ಒಲಿಂಪಿಕ್ ಸಂಸ್ಥೆಯ ಕಾರ್ಯದರ್ಶಿ ಎಂ.ಅಚ್ಯುತನ್ ಸ್ವಾಗತಿಸಿದರು. ಡಾ. ಎಂ.ಕೆ.ರಾಜಶೇಖರನ್ ವಂದಿಸಿದರು.

ಬಾಕ್ಸ...

ಪ್ಯಾರಿಸ್ ಒಲಿಂಪಿಕ್‌ಗೆ ಪೂರ್ವಭಾವಿ

ಜುಲೈ 26ರಿಂದ ಆಗಸ್ಟ್ 11ರ ತನಕ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯಲಿರುವ 33ನೇ ಒಲಿಂಪಿಕ್ ಕ್ರೀಡಾಕೂಟದ ಪೂರ್ವಭಾವಿಯಾಗಿ ಒಲಿಂಪಿಕ್ ಸಾಮೂಹಿಕ ಓಟ ಆಯೋಜಿಸಲಾಗಿತ್ತು. ರಾಜ್ಯ ಮತ್ತು ಜಿಲ್ಲಾಮಟ್ಟದ ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಸಾಮೂಹಿಕ ಓಟದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net