ಮೈಸೂರಿನಲ್ಲಿ ವಿಪ್ರರಿಂದ ಸಾಮೂಹಿಕ ಋಗ್ವೇದ ಹಾಗೂ ಯಜುರುಪಾಕರ್ಮ

Mass Rigveda and Yajurupakarma by Vipra in Mysore
Published on

ಮೈಸೂರು: ವಿಜಯನಗರದ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶನಿವಾರ ವಿಪ್ರರಿಂದ ಸಾಮೂಹಿಕ ಋಗ್ವೇದ ಹಾಗೂ ಯಜುರುಪಾಕರ್ಮ ನೆರವೇರಿತು. ಬ್ರಾಹ್ಮಣರು ಸಾಮೂಹಿಕವಾಗಿ ಯಜ್ಞೋ ಪವಿತ್ರಂ ಜನಿವಾರ ಬದಲಾಯಿಸಿಕೊಂಡು ಸಂಧ್ಯಾವಂದನೆ, ಗಾಯತ್ರಿ ಜಪ, ನೆರೆವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರಿ ಎನ್.ಶ್ರೀನಿವಾಸನ್, ಭಾರತೀಯ ಸನಾತನ ಹಿಂದು ಧರ್ಮದಲ್ಲಿ ವೇದ ಮತ್ತು ಶಾಸ್ತ್ರ ಅಧ್ಯಯನಕ್ಕೆ ಬಹಳ ಮಹತ್ವವಿದೆ. 8ನೇ ವರ್ಷಕ್ಕೆ ವಟುವಿಗೆ ಉಪನಯನ ಮಾಡಿ ಗಾಯತ್ರಿ ಮಂತ್ರ ಉಪದೇಶಿಸಿ ಗುರುಕುಲಕ್ಕೆ ಕಳಿಸುವ ಪಂಪರೆಯಿತ್ತು. ಯಜುರ್ ವೇದ ಋಗ್ವೇದ ಪ್ರಕಾರವಾಗಿ ಶಾಸ್ತ್ರಗಳನ್ನು ಪಾಲಿಸುವ ವೈದಿಕರು ತಮ್ಮ ಋಷಿಗಳಿಗೆ ಪೂಜಿಸಿ ಯಜ್ಞೋಪವಿತ್ರಂ ಜನಿವಾರ ಧಾರಣೆ ಮಾಡುವ ಉಪಾಕರ್ಮ ಧರ್ಮರಕ್ಷಣೆಯ ಪ್ರತೀಕವಾಗಿದೆ ಎಂದರು.

ಸಾವಿರಾರು ವರ್ಷಗಳ ಹಿಂದೆ ಸಂವತ್ಸರಗಳ ಹಬ್ಬಗಳಲ್ಲಿ ಪಂಚಾಂಗ ನಿರ್ಣಯಿಸಿರುವಂತೆ ಮಹೂರ್ತ ಆಚರಣೆ ಪಾಲಿಸುವ ಕ್ರಮಕ್ಕೆ ಮೊದಲೇ ನಿಶ್ಚಯಿಸಿರುತ್ತದೆ ಎಂದರೆ ಸನಾತನ ಧರ್ಮದ ಶಕ್ತಿಯ ಸಂಕೇತವಾಗಿದೆ ಎಂದು ಹೇಳಿದರು. ಈ ಸಂದರ್ಭ ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಪ್ರಮುಖರಾದ ಗಿರೀಶ್, ಅಶ್ವಿನ್, ಶ್ರೀರಾಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net