

ಶ್ರೀನಿವಾಸಪುರ: ಅಭಿವೃದ್ಧಿಗೆ ಸಹಕರಿಸದ ಪಿಡಿಒ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ದಳಸನೂರು ಗ್ರಾಪಂ ಅಧ್ಯೆಕ್ಷೆ ಮತ್ತು ಸದಸ್ಯರು ಗ್ರಾಪಂ ಕಚೇರಿ ಮುಂಭಾಗ ಹಮ್ಮಿಕೊಂಡಿರುವ ಧರಣಿ ಶುಕ್ರವಾರ ಎರಡನೇ ದಿನವೂ ಮುಂದುವರೆಯಿತು.
ಅಧ್ಯಕ್ಷೆ ಸ್ವಾತಿ ಜಯಪ್ರಕಾಶ್ ಮಾತನಾಡಿ, ಪಂಚಾಯಿತಿಗೆ ಸಂಬಂಧಿಸಿದಂತೆ ಒಟ್ಟು 16 ಸದಸ್ಯರಿದ್ದು, ಪಿಡಿಒ ವಿರುದ್ಧ 12 ಸದಸ್ಯರು ಇದ್ದು, ಇಒ ಕಚೇರಿಯಿಂದ ವ್ಯವಸ್ಥಾಪಕ ಮಂಜುನಾಥ್ ಅವರು ನಿನ್ನೆ( ಬುಧವಾರ) ಬಂದು ನಮ್ಮ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದರು. ಪಿಡಿಒ ರವರು ಸರ್ವ ಸದಸ್ಯರ ಸಭೆಯಲ್ಲಿ ತೀಮಾರ್ನವಾಗಿರುವದೇ ಒಂದು ಅವರು ಮಾಡುತ್ತಿರುವ ಕೆಲಸ ಒಂದು ರೀತಿಯಾಗಿರುವುದರಿಂದ ನಮಗೆಲ್ಲಾ ಅವರ ಕಾರ್ಯವೈಖರಿಯ ಬಗ್ಗೆ ಅಸಮಾದಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸದಸ್ಯ ಹೊಸಹಳ್ಳಿ ಎಸ್. ಬಾಬು ಮಾತನಾಡಿ, ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಜನರ ಸೇವೆಯನ್ನು ಮಾಡದೇ ಇರುವುದಕ್ಕಿಂತ, ಮನೆಯಲ್ಲಿ ಇರುವುದೇ ವಾಸಿ. ಪಿಡಿಒ ಅವರನ್ನ ವರ್ಗಾಯಿಸುವಂತೆ ತಾಪಂ ಇಒ ಹಾಗೂ ಜಿಪಂ ಸಿಇಒ ಅವರಿಗೆ ಮನವಿ ಮಾಡಿದ್ದರೂ ಸಹ ಯಾವುದೇ ಉಪಯೋಗವಾಗಿಲ್ಲ. ಆದ್ದರಿಂದ ನಾವು ಜಿಲ್ಲಾಧಿಕಾರಿಗಳ ಬಳಿ ತೆರಳಿ ಸಾಮೂಹಿಕ ರಾಜಿನಾಮೆ ನೀಡುತ್ತೇವೆ ಎಂದು ಎಚ್ಚರಿಸಿದರು.