ಉಳ್ಳಾಲ; ಸಾಮೂಹಿಕ ನಮಾಜ್ ತಡೆದ ಪೊಲೀಸರು

koppal Bakrid festival, Mass prayer
Published on

ಉಳ್ಳಾಲ: ಕರೊನಾ ನಿಯಂತ್ರಣ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮನೆಯಲ್ಲೇ ಸಾಮೂಹಿಕ ನಮಾಜ್ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಕೊಣಾಜೆ ಪೊಲೀಸರು ಶುಕ್ರವಾರ ಕಾರ್ಯಾಚರಣೆ ನಡೆಸಿದರು.

ಕರೊನಾ ನಿಯಂತ್ರಣ ನಿಟ್ಟಿನಲ್ಲಿ ಚರ್ಚ್, ದೈವ-ದೇವಸ್ಥಾನ, ಮಸೀದಿ, ಮಂದಿರಗಳನ್ನು ಬಂದ್ ಮಾಡಲಾಗಿದೆ. ಮಸೀದಿಗಳನ್ನು ಬಂದ್ ಮಾಡಿ ಸಾಮೂಹಿಕ ನಮಾಜ್‌ನಿಂದ ದೂರ ಇರುವಂತೆ ಉನ್ನತ ಧರ್ಮಗುರುಗಳು ಸೂಚನೆ ನೀಡಿದ್ದಾರೆ.

ಆದರೆ ಮಂಜನಾಡಿ ಗ್ರಾಮದ ಕುವೆನಾಡು ಎಂಬಲ್ಲಿ ಮಸೀದಿಯೊಂದರ ಕಾರ್ಯದರ್ಶಿಯ ಉಸ್ತುವಾರಿಯಲ್ಲಿ ಪದಾಧಿಕಾರಿಯೊಬ್ಬರ ಮನೆಯಲ್ಲಿ ಶುಕ್ರವಾರ ಮಧ್ಯಾಹ್ನ 200 ಜನರನ್ನು ಸೇರಿಸಿ ಸಾಮೂಹಿಕ ನಮಾಜ್‌ಗೆ ಶಾಮಿಯಾನ ಸಹಿತ ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಕೊಣಾಜೆ ಪೊಲೀಸರು ದಾಳಿ ನಡೆಸಿದ್ದು, ಸೇರಿದವರು ಸ್ಥಳದಿಂದ ಪರಾರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net