

ಉಡುಪಿ: ಭಾರತ ಪಾಕ್ ಉದ್ವಿಗ್ನತೆ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಶುಕ್ರವಾರದ ಜುಮಾ ನಮಾಜ್ ಬಳಿಕ ದೇಶದ ಒಳಿತಿಗಾಗಿ ಮುಸಲ್ಮಾನರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು.
ದೇಶದಲ್ಲಿ ಶಾಂತಿ ನೆಲೆಸುವಂತೆ ಮುಸಲ್ಮಾನ ಬಾಂಧವರು ದುಆ ನಿರ್ವಹಿಸಿದರು. ಶತ್ರು ರಾಷ್ಟ್ರದ ಯುದ್ಧದಲ್ಲಿ ದೇಶಕ್ಕೆ ಹಿತವಾಗಬೇಕು. ಆದಷ್ಟು ಬೇಗ ದೇಶ ಮತ್ತೆ ಶಾಂತಿಯತ್ತ ಮರಳಬೇಕು ಎಂದು ಧರ್ಮಗುರುಗಳು ಪ್ರಾರ್ಥನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಮುಖಂಡ ಇಕ್ಬಾಲ್ ಮನ್ನಾ , ಪೆಹಲ್ಗಾಂ ದಾಳಿಯ ನಂತರ ನಾವು ಪಾಕಿಗಳಿಗೆ ತಕ್ಕ ಪಾಠ ಕಲಿಸಿದ್ದೇವೆ. ಪಾಕಿಸ್ಥಾನಕ್ಕೆ ಹೊಡೆಯಲು ಭಾರತಕ್ಕೆ ಅರ್ಧ ಗಂಟೆ ಸಾಕು. ಪದೇಪದೇ ಜಗಳಕ್ಕೆ ಬರುವ ಪಾಕ್‌ಗೆ ತಕ್ಕ ಶಾಸ್ತಿಯಾಗಲಿದೆ. ವಕ್ಫ್ ಇಲಾಖೆಯಿಂದಲೂ ನಮಗೆ ನಿರ್ದೇಶನ ಅನ್ವಯ ನಾವೆಲ್ಲ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ. ದೇಶಕ್ಕಾಗಿ ದೇಶದ ಜನರ ಒಳಿತಿಗಾಗಿ ಮಸೀದಿಯಲ್ಲಿ ಪ್ರಾರ್ಥನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.