ಉಪ್ಪಿನಬೆಟಗೇರಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

11 upbr 4-Ramjan namaj
Published on

ಉಪ್ಪಿನಬೆಟಗೇರಿ: ಗ್ರಾಮ ಸೇರಿ ಪುಡಕಲಕಟ್ಟಿ, ಅಮ್ಮಿನಬಾವಿ, ಯಾದವಾಡ, ಲಕಮಾಪೂರ, ಹಾರೋಬೆಳವಡಿ, ಕರಡಿಗುಡ್ಡ, ಹನುಮನಾಳ, ಹನುಮನಕೊಪ್ಪ ಗ್ರಾಮಗಳಲ್ಲಿ ಮುಸ್ಲಿಮರು ಗುರುವಾರ ರಂಜಾನ್ ಹಬ್ಬವನ್ನು ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು.

ಉಪ್ಪಿನಬೆಟಗೇರಿ ಗ್ರಾಮದ ಹೊಸಪೇಟಿ ಓಣಿಯಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಬೆಳಗ್ಗೆ 9 ಕ್ಕೆ ಗ್ರಾಮದ ಜಾಮಿಯಾ ಮಸೀದಿಯಲ್ಲಿ ಜಮಾವಣೆಗೊಂಡ ಮುಸ್ಲಿಮರು ಹೊಸಪೇಟಿ ಓಣಿಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿದರು. ಅಲ್ಲಿ ಧರ್ಮ ಗುರುಗಳು ಕುರಾನ್ ಪಠಣ ಮಾಡಿಸಿದರು. ನಂತರ ಪರಸ್ಪರ ಶುಭ ಕೋರಿದರು.

ಧರ್ಮ ಗುರುಗಳಾದ ಹಜರತ್ ಆರೀಫ್ ಉಲ್ ಹಕ್ ಷಾ ಖಾದ್ರಿ ಕಲಂದರ, ಅಂಜುಮನ್ ಸಂಸ್ಥೆ ಅಧ್ಯಕ್ಷ ಬಾಬಾ ಮೊಯಿದ್ದೀನ್ ಚೌಧರಿ, ಬಸೀರಹ್ಮದ ಮಾಳಗಿಮನಿ, ಖಲೀಲ ಅಹ್ಮದ ಜಾಲೆಗಾರ, ಮಹಮ್ಮದರಫೀಕ್ ಪಂಚ, ಎ.ಎ. ಕಿಲ್ಲೆದಾರ, ಅಬ್ದುಲ್​ಖಾದರ ದೊಡವಾಡ, ಅಸ್ಗರ್​ಅಲಿ ಲಂಗೂಟಿ, ಅಬ್ದುಲ್​ಸಲಾಂ ಪಂಚ, ನೂರಅಹ್ಮದ ಮುಜಾವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net