ಜಮಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ

7spt1
Published on

 ಸೋಮವಾರಪೇಟೆ: ಮಾದಾಪುರ ಮೊಯದ್ದೀನ್ ಜುಮಾ ಮಸೀದಿಯಲ್ಲಿ ಜಮಾಅತ್‌ನ ಖತೀಬರಾದ ಮಹಮ್ಮದ್ ಶಾಫಿ ಸಖಾಫಿ ನೇತೃತ್ವದಲ್ಲಿ ಶನಿವಾರ ಬಕ್ರೀದ್ ಹಬ್ಬದ ಪ್ರಯುಕ್ತ ನಮಾಜ್ ಮಾಡಲಾಯಿತು.

ನಂತರ ಮಸೀದಿಯಿಂದ ಮೆರವಣಿಗೆ ಹೊರಟು ಜಾರಿಕೊಲ್ಲಿಯ ಸ್ಮಶಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ಜಮಾಅತ್‌ನ ಅಧ್ಯಕ್ಷ ಎ.ಪಿ. ಅಕ್ಬರ್, ಉಪಾಧ್ಯಕ್ಷರಾದ ಬಿ.ಈ.ಸಿದ್ದಿಕ್, ಪ್ರಧಾನ ಕಾರ್ಯದರ್ಶಿ ಎಂ.ಎ.ಮಜೀಬ್, ಖಜಾಂಜಿ ಮಹಮದ್ ಆಲಿ, ಸಹ ಕಾರ್ಯದರ್ಶಿ ಎಂ.ಎಂ. ಅಶ್ರಫ್, ಸಹ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಸದಸ್ಯರಾದ ರಜಾಕ್, ಗಫರ್, ರಿಯಾಜ್ ಅಹ್ಮದ್, ಅಶ್ರಫ್, ಆಟೋ ಸಲೀಂ, ನೌಸಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net