

ಹುಬ್ಬಳ್ಳಿ: ಎಸ್‌ಎಸ್ ಕೆ ಮಿತ್ರ ಮಂಡಳಿ, ಎಸ್‌ಎಸ್‌ಕೆ ಸಮಾಜ ಪಂಚ ಕಮಿಟಿ ವಿದ್ಯಾನಗರ ಹಾಗೂ ಮೈತ್ರಿ ಮಹಿಳಾ ಅಸೋಸಿಯೇಷನ್ ಜವಳಿ ಗಾರ್ಡನ್ ಸಹಯೋಗದಲ್ಲಿ ಇಲ್ಲಿಯ ವಿದ್ಯಾನಗರದ ಶ್ರೀ ಜಾಗೃತದೇವಿ ಅಂಬಾಭವಾನಿ ದೇವಸ್ಥಾನದಲ್ಲಿ ಸತತ ಎರಡನೇ ಬಾರಿ 108 ವಟುಗಳಿಗೆ ಸಾಮೂಹಿಕ ಉಪನಯನ (ಬ್ರಹ್ಮೋಪದೇಶ) ಕಾರ್ಯಕ್ರಮ ಸೋಮವಾರ ಅತೀ ವಿಜೃಂಭಣೆಯಿಂದ ಜರುಗಿತು.
ವಿಎಕೆ ಫೌಂಡೇಷನ್ ಸಂಸ್ಥಾಪಕ ವೆಂಕಟೇಶ ಅಶೋಕ ಕಾಟವೆ ಅವರು ಮಕ್ಕಳ ಶಿಕ್ಷಣ ಕಲಿಕೆಗೆ ಉಪಯೋಗವಾಗುವ ಉಡುಗೊರೆಗಳನ್ನು ನೀಡಿ ಶುಭ ಹಾರೈಸಿದರು.
ಜಗದ್ಗುರು ಶ್ರೀ ಸದಾಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕ ಮಹೇಶ ಟೆಂಗಿನಕಾಯಿ ಅತಿಥಿಗಳಾಗಿ ಆಗಮಿಸಿದ್ದರು. ನಾಗರಾಜ ಪಟ್ಟಣ ಅಧ್ಯಕ್ಷತೆ ವಹಿಸಿದ್ದರು.
ರಮೇಶ ಬುರಬುರೆ, ಮೀರಾ ಮೆಹರವಾಡೆ, ಪರಶುರಾಮಸಾ ಹಬೀಬ, ಎನ್.ಆರ್. ಹಬೀಬ, ಆಧ್ಯಾತ್ಮಿಕ ಚಿಂತಕಿ ಗುರುಮಾತಾ ವಿಜಯಾ ಬದ್ದಿ, ಸುಭಾಷಸಿಂಗ್ ಜಮಾದಾರ, ತಿಪ್ಪಣ್ಣ ಮಜ್ಜಗಿ, ಕಿಶನ ಬೆಳಗಾವಿ, ಸರಳಾ ಭಾಂಡಗೆ, ಪ್ರೀತಿ ವಿನಾಯಕ ಲದ್ವಾ, ಸುನಿತಾ ಪ್ರಕಾಶ ಬುರಬುರೆ, ಸರಸ್ವತಿ ಧೋಂಗಡಿ, ರತ್ನಮಾಲಾ ಬದ್ದಿ ಅತಿಥಿಗಳಾಗಿ ಆಗಮಿಸಿದ್ದರು.
ಪ್ರಮುಖರಾದ ಸುನಿಲ್ ಜಿತೂರಿ, ರಾಘವೇಂದ್ರ ಹಬೀಬ, ತುಳಸಿ ಬಸವಾ, ಕೃಷ್ಣ ಹಬೀಬ, ನಾಗರಾಜ ಹಬೀಬ, ವಿಕ್ರಂ ಬಾಕಳೆ, ಪರಶುರಾಮ ಲದವಾ, ಅರುಣ ಕಾಟವೆ, ರಾಜು ಹಬೀಬ, ಹೀರಾಲಾಲ್ ಬದ್ದಿ, ಶ್ರೀಧರ ಹಬಿಬ, ಶಂಕರ ಮಿಸ್ಕಿನ್, ರಾಕೇಶ ಹನಮ ಸಾಗರ, ವಿನೋದ ಡಮಾಮಗರ, ದತ್ತಾ ಬದ್ದಿ, ಶ್ರೀಕಾಂತ ಮಿಸ್ಕಿನ್, ಗುರುನಾಥ ಭಾಂಡಗೆ ಇತರರು ಉಪಸ್ಥಿತರಿದ್ದರು.