ಸಾಮೂಹಿಕ ನವಚಂಡಿಕಾ ಯಾಗ

pooja
Published on

ಧಾರವಾಡ: ನಗರದ ಹೆಬ್ಬಳ್ಳಿ ರಸ್ತೆಯಲ್ಲಿನ ಮಣಿಕಂಠನಗರದಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಅ. 22 ಮತ್ತು 23ರಂದು ಸಾಮೂಹಿಕ ನವಚಂಡಿಕಾ ಯಾಗ ಏರ್ಪಡಿಸಲಾಗಿದೆ. 22ರಂದು ಸಂಜೆ ೪ರಿಂದ ೫ರವರೆಗೆ ಸಾಮೂಹಿಕ ಸಂಕಲ್ಪ, ನಂತರ ಮಹಾಗಣಪತಿ ಪೂಜಾ, ಮಹಾ ಸಂಕಲ್ಪ ಸ್ವಸ್ಥಿ ಪುಣ್ಯಾಹವಾಚನ, ದುರ್ಗಾಸಪ್ತಶತಿ ಪಾರಾಯಣ, ಮಹಾಮಂಗಳಾರತಿ ಜರುಗಲಿದೆ. ೨೩ರಂದು ಬೆಳಗ್ಗೆ ೮ ಗಂಟೆಗೆ ಗಣಪತಿ ಪೂಜೆ, ದೇವತಾ ಸ್ಥಾಪನೆ ಪೂಜೆ, ೯.೩೦ರಿಂದ ೧೧ರವರೆಗೆ ಸಾಮೂಹಿಕ ನವಚಂಡಿಕಾ ಮಹಾಯÁಗ, ೧೧ರಿಂದ ೧೧.೩೦ರವರೆಗೆ ಬಲಿದಾನ ಪೂಜೆ, ಸುಮಂಗಲಿ ಪೂಜೆ, ೧೧.೩೦ಕ್ಕೆ ಮಹಾಮಂಗಳಾರತಿ, ೧೨ ಗಂಟೆಗೆ ಮಹಾಅಭಿಷೇಕ ಅಲಂಕಾರ, ಮಹಾ ಮಂಗಳಾರತಿ, ತೀರ್ಥಪ್ರಸಾದ ಕಾರ್ಯಕ್ರಮ ಜರುಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net