ಸಾಮೂಹಿಕ ವಿವಾಹಗಳು ಬಡವರಿಗೆ ಸಹಕಾರಿ

samuhik vivah
ಇಳಕಲ್ಲದ ಶ್ರೀ ವಿಜಯ ಮಹಾಂತೇಶ ಗದ್ದುಗೆ ಆವರಣದಲ್ಲಿ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿದರು. ಗುರುಮಹಾಂತ ಶ್ರೀಗಳು, ಡಾ. ಬಸವಲಿಂಗ ಸ್ವಾಮಿಗಳು, ಮುರ್ತುಜಾ ಖಾದ್ರಿ, ದರ್ಗಾ ಗುರು ಫೈಸಲ್‌ಪಾಷಾ, ವ್ಯಾಪಾರಸ್ಥರಾದ ಬಸವರಾಜ ಕಬ್ಬಿಣದ, ಸಂಗಣ್ಣ ಕಂಪ್ಲಿ, ಮಹಾಂತಗೌಡ ಪಾಟೀಲ ಇತರರಿದ್ದರು.
Published on

ಇಳಕಲ್ಲ(ಗ್ರಾ): ನಗರದ ವಿಜಯ ಮಹಾಂತೇಶ ರಥೋತ್ಸವ ಅಂಗವಾಗಿ ಶರಣ ಪದ್ಧತಿಯಂತೆ ಗದ್ದುಗೆ ಆವರಣದಲ್ಲಿ ಎಪಿಎಂಸಿ ವ್ಯಾಪಾರಸ್ಥರ ಸಂಘದಿಂದ ಸೋಮವಾರ 23 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳುವುದರಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಗಂಡಿನ ಕಡೆಯವರು ಮುಂದೆ ಯಾವುದೇ ಕಾರಣದಿಂದಲೂ ಹೆಣ್ಣಿನ ಕಡೆಯವರನ್ನು ವರದಕ್ಷಿಣೆಗಾಗಿ ಸತಾಯಿಸಬಾರದು. ಪರಸ್ಪರ ಅನ್ಯೋನ್ಯವಾಗಿ ಸುಖ ಸಂಸಾರ ನಡೆಸುವ ಜತೆಗೆ ಮಿತ ಸಂತಾನ ಹೊಂದಬೇಕೆಂದು ಹೇಳಿದರು.

ಗುರುಮಹಾಂತ ಶ್ರೀಗಳು, ಡಾ. ಬಸವಲಿಂಗ ಸ್ವಾಮಿಗಳ, ಮುರ್ತುಜಾ ಖಾದ್ರಿ, ದರ್ಗಾ ಗುರು ಫೈಸಲ್ ಪಾಷಾ ಸಾನ್ನಿಧ್ಯ ವಹಿಸಿದ್ದರು.

ಅಡತ ವ್ಯಾಪಾರಸ್ಥ ಬಸವರಾಜ ಕಬ್ಬಿಣದ, ಸಂಗಣ್ಣ ಕಂಪ್ಲಿ, ತೊಂಡಿಹಾಳ, ಬಸವರಾಜ ಗಾಣಿಗೇರ, ಶಿವರುದ್ರಪ್ಪ ಗೊಂಗಡಶೆಟ್ಟಿ, ಮಹಾಂತಗೌಡ ಪಾಟೀಲ, ಜಿಎಂಇ, ಮುತ್ತು ನಾಲವಾಡದ, ಕಮಲ ಭಂಡಾರಿ, ದೀಪಕ ಭಂಡಾರಿ, ನಗರಸಭೆ ಸದಸ್ಯರಾದ ಸುರೇಶ ಜಂಗ್ಲಿ, ಮೌಲೇಶ ಬಂಡಿವಡ್ಡರ, ಅಮೃತ ಬಿಜ್ಜಳ ಮತ್ತಿತರರಿದ್ದರು.

ಮಲ್ಲಯ್ಯ ಗಣಾಚಾರಿ ವಿವಾಹ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net