

ಕುಷ್ಟಗಿ: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಾಮೂಹಿಕ ವಿವಾಹಗಳು ವರದಾನವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಇದನ್ನೂ ಓದಿ: ಸಾಮೂಹಿಕ ವಿವಾಹದಿಂದ ಬಡವರಿಗೆ ಅನುಕೂಲ
ತಾಲೂಕಿನ ಕೊರಡಕೇರಾ ಗ್ರಾಮದ ಅಮೋಘಸಿದ್ದೇಶ್ವರ ದೇವಸ್ಥಾನದ ನೂತನ ಗೋಪುರ ಹಾಗೂ ದ್ವಾರಬಾಗಿಲು ಲೋಕಾರ್ಪಣೆ ನಿಮಿತ್ತ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವದಂಪತಿಗಳಿಗೆ ಶುಭ ಹಾರೈಸಿ ಬುಧವಾರ ಮಾತನಾಡಿದರು.
ಸರ್ವ ಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಎಲ್ಲೆಡೆ ನಡೆಯುತ್ತಿವೆ. ಬಡ ಕುಟುಂಬಗಳ ಆರ್ಥಿಕ ಹೊರೆ ಕಡಿಮೆ ಮಾಡುವುರ ಜತೆಗೆ ಸೌಹಾರ್ದತೆಯ ಸಂಕೇತವಾಗಿ ಸಾಮೂಹಿಕ ವಿವಾಹಗಳು ನಡೆಯುತ್ತಿವೆ. ವಿವಾಹ ಎಂಬುದು ಎರಡು ದೇಹಗಳ ಸಮ್ಮಿಲನ ಮಾತ್ರವಲ್ಲ. ಬದಲಿಗೆ ಎರಡು ಹೃದಯಗಳನ್ನು ಬೆಸೆಯುವ ಪವಿತ್ರ ಜೀವನ ಪದ್ಧತಿ. ಸತಿ-ಪತಿಗಳು ಹೊಂದಾಣಿಕೆಯಿಂದ ಜೀವನ ನಡೆಸಬೇಕಿದೆ ಎಂದರು.
ಸಂಸದ ರಾಜಶೇಖರ ಹಿಟ್ನಾಳ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿದರು. ಕನಕ ಗುರು ಪೀಠದ ಸಿದ್ದರಾಮಾನಂದ ಪುರಿ ಸ್ವಾಮೀಜಿ, ಸರೂರು ಹಾಲುಮತ ಮೂಲ ಗುರುಪೀಠದ ಸಿದ್ದಯ್ಯ ಸ್ವಾಮಿ ತಾತನವರು, ಬಾದಿಮನಾಳ ಗ್ರಾಮದ ಕಾಗಿನೆಲೆ ಗುರುಪೀಠದ ಶಾಖಾಮಠದ ಶಿವ ಸಿದ್ದೇಶ್ವರ ಸ್ವಾಮೀಜಿ,
ಹಾಲುಮತ ಸಮುದಾಯದ ಗುರುಗಳಾದ ತೇಜಯ್ಯ ಗುರುವಿನ್, ಸಿದ್ದಯ್ಯ ಗುರುವಿನ್, ಕಳಕಯ್ಯ ಗುರುವಿನ್, ಶಿವಾನಂದಯ್ಯ ಗುರುವಿನ್, ಪ್ರಮುಖರಾದ ರವಿಕುಮಾರ ಮದ್ದಾನಿ ಹಿರೇಮಠ, ಶಶಿಧರ ಕವಲಿ, ಕಲ್ಲೇಶ ತಾಳದ್, ಬಸವರಾಜ ಹಳ್ಳೂರು, ಶೈಲಜಾ ಬಾಗಲಿ, ರಮೇಶ ಕೊಳ್ಳಿ, ಮಲ್ಲಣ್ಣ ಪಲ್ಲೇದ್, ಗ್ರಾಪಂ ಅಧ್ಯಕ್ಷ ಮಾನಪ್ಪ ತಳವಾರ್ ಇತರರಿದ್ದರು.