

ಕನಕಗಿರಿ: ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ ಬೀಳಲಿದೆ ಎಂದು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಮೇಶ ನಾಯಕ ಹೇಳಿದರು.
ಇದನ್ನೂ ಓದಿ: ಬಾಲ್ಯ ವಿವಾಹಕ್ಕೆ ಬಿದ್ದಿಲ್ಲ ತಡೆ
ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಸೋಮವಾರದಂದು ಈಶ್ವರ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ 11ನೇ ವರ್ಷದ ಸಾಮೂಹಿಕ ವಿವಾಹ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಈ ಹಿಂದೆ ಹಿರಿಯರು ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎನ್ನುತ್ತಿದ್ದರು. ಒಂದು ಮದುವೆ ಮಾಡಬೇಕೆಂದರೆ, ಲಕ್ಷಾಂತರ ರೂ. ಖರ್ಚು. ಅದಕ್ಕಾಗಿ ಸಾಲ ಮಾಡಿ ತಿರಿಸಲು ಜೀವನಪೂರ್ತಿ ವ್ಯಥೆ ಪಡಬೇಕು.
ಆದರೆ, ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವುದರಿಂದ ವಧು-ವರರು ಖರ್ಚಿನ ಬಗ್ಗೆ ಚಿಂತೆಪಡಬೇಕಿಲ್ಲ. ಇವುಗಳಿಂದ ಜಾತಿ ಪದ್ಧತಿ ನಿರ್ಮೂಲನೆ ಸಾಧ್ಯ. ಅಲ್ಲದೇ, ಸಾವಿರಾರು ಜನರ, ಸ್ವಾಮೀಜಿಗಳ ಆಶೀರ್ವಾದವು ದೊರೆಯಲಿದ್ದು, ಸರ್ಕಾರದ ಸೌಕರ್ಯಗಳು ಒದಗಲಿವೆ ಎಂದರು.
ಅಂಕಲಿಮಠದ ಬಸವರಾಜ ತಾತಾ, ತಂಗಡಗಿ ಟ್ರಸ್ಟ್‌ನ ವೆಂಕಟೇಶ ತಂಗಡಗಿ, ಬ್ಲಾಕ್ ಕಾಂಗ್ರೆಸ್
ಅಧ್ಯಕ್ಷ ಕೆ.ಗಂಗಾಧರಸ್ವಾಮಿ, ತಾಪಂ ಮಾಜಿ ಸದಸ್ಯ ನಾಗಪ್ಪ ಚಿಂಚಲಿ, ಪ್ರಮುಖರಾದ
ನಾಗಲಿಂಗಪ್ಪ, ಹೊಳಿಯಪ್ಪ ಇದ್ದರು.